ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದ 'ನಮ್ಮಮೆಟ್ರೋ'

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಜನಸಾಗರ ಹೆಚ್ಚಾಗುತ್ತಾ ಬಂದಂತೆ ಟ್ರಾಫಿಕ್ ಸಮಯೆಯು ಕೂಡ ಎದುರಾಗುತ್ತದೆ. ಅದಕ್ಕಾಗಿಯೇ 'ನಮ್ಮ ಮೆಟ್ರೋ' ವನ್ನು ಕಲ್ಪಿಸಲಾಗಿದೆ ಆದರೆ ಇದು ಎಲ್ಲಾ ಸ್ಥಳಗಳಲ್ಲೂ ಮೆಟ್ರೋ ಸೌಲಭ್ಯವಿಲ್ಲದ ಕಾರಣ ಸ್ವಲ್ಪ ತೊಂದರೆಗೀಡಾಗುವುದು ಸಹಜ.
ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳು. ಇಲ್ಲಿಗೆ ಮೆಟ್ರೋ ರೈಲ್ವೆ ಸೌಲಭ್ಯ ಒದಗಿಸಲು ಮೆಟ್ರೋ ಮುಂದಾಗಿದ್ದು, ಇದರಿಂದ ಮೆಟ್ರೋ ಅಂದಾಜು 8 ಲಕ್ಷ ಐಟಿ ಉದ್ಯೋಗಿಗಳನ್ನು ತಲುಪುವ ನಿರೀಕ್ಷೆ ಹೊಂದಿದೆ. ಬೆಂಗಳೂರಿನ ಸಿಲ್ಕ್ ಬೋರ್ಡ್- ಕೆ.ಆರ್. ಪುರಂ ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಇನ್ನೊಂದು ವಾರದಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಲಿದೆ. ರಾಜ್ಯ ಸರ್ಕಾರ ನೀಡಿದ್ದ 500 ಕೋಟಿ ರೂ. ಆದಾಯದ ಗುರಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿ ಆರಂಭಿಸಲು ಸಿದ್ಧವಾಗಿದೆ.
ಪ್ರಮುಖ ಐಟಿ ಹಬ್ ಆಗಿರುವ ಈ ಪ್ರದೇಶಗಳಲ್ಲಿ ಮೆಟ್ರೋ ಕಲ್ಪಿಸುವಂತೆ 2016ರಲ್ಲಿ ಬಿಎಂಆರ್‌ಸಿಎಲ್ ಯೋಜನಾ ವರದಿ ಸಿದ್ಧಪಡಿಸಿತ್ತು. ಅಂದಾಜು 4202 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಗೆ 2017 ಮಾರ್ಚ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿತ್ತು. ಇನ್ನು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸಿದ್ಧತೆ ನಡೆಸಿರುವ ಬಿಎಂಆರ್‌ಸಿಎಲ್ ಇದಕ್ಕಾಗಿ ತುಂಡು ಗುತ್ತಿಗೆ ರೀತಿಯಲ್ಲಿ 2-3 ಕಿಲೋಮೀಟರ್ ಗುತ್ತಿಗೆಯನ್ನು ಒಬ್ಬೊಬ್ಬರಿಗೆ ನೀಡಲು ಮುಂದಾಗಿದೆ.
Comments