ಶೌಚಕ್ಕೆಂದು ಹೋದ ವಧು ಪ್ರಿಯಕರನೊಂದಿಗೆ ಎಸ್ಕೇಪ್

ಹಾರ ಬಲಿಸುವ ವರೆಗೂ ಮಂಟಪದಲ್ಲಿದ್ದು ಶಾಸ್ತ್ರಗಳು ಶುರುವಾಗುವ ಮುನ್ನವೇ ಶೌಚಕ್ಕೆಂದು ಹೇಳಿ ಹೋದ ವದು ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕೊತವಾಲಿ ಕ್ಷೇತ್ರದ ಗುರಖಶ್‍ಗಂಜ್ ಎಂಬಲ್ಲಿ ನಡೆದಿದೆ.
ವಧು ಶೌಚಕ್ಕೆ ಹೋಗಬೇಕೆಂದು ಅಲ್ಲಿಯ ಚಿಕ್ಕ ಹೆಣ್ಣು ಮಕ್ಕಳ ಜೊತೆ ತೆರಳಿದ್ದಾಳೆ. ಕೆಲವು ಸಮಯದ ಬಳಿಕ ಮಕ್ಕಳು ವಾಪಸ್ಸಾದ್ರೆ ವಧು ಅಲ್ಲಿಂದಲೇ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಇತ್ತ ವಧು ನಾಪತ್ತೆ ವಿಷಯ ತಿಳಿದ ಕೂಡಲೇ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗ್ರಾಮದ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ವರನ ಕಡೆಯವರು ವಧು ಪರಾರಿಯಾಗಿದ್ದರಿಂದ ಮದುವೆ ಕ್ಯಾನ್ಸಲ್ ಮಾಡಿ ಹಿಂದಿರುಗಿದ್ದಾರೆ. ಯುವತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿಗೆ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ.
Comments