ಇಂದಿನಿಂದ ಮಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ
‘ನಮ್ಮ ಮೆಟ್ರೋ’ದಲ್ಲಿ ಮೊದಲ ಬೋಗಿಯ ಎರಡು ದ್ವಾರಗಳ ಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವ ಪ್ರಾಯೋಗಿಕ ಮೀಸಲು ವ್ಯವಸ್ಥೆ ಸೋಮವಾರ(ಫೆ.19)ದಿಂದ ಜಾರಿಯಾಗಿದೆ.
ಪೀಕ್ ಅವಧಿಯಲ್ಲಿ ಮಾತ್ರ ಜಾರಿ ಇರಲಿದ್ದು, ಬೆಳಗ್ಗೆ 9 ರಿಂದ 11.30 ರವರೆಗೆ ಹಾಗೂ ಸಂಜೆ 5.30 ರಿಂದ7.30 ರವರೆಗೆ ಪ್ರವೇಶ ದ್ವಾರಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಈ ಎರಡು ದ್ವಾರಗಳಲ್ಲಿ ಪ್ರವೇಶಿಸುವ ಮಹಿಳೆಯರು ಪುರುಷರಿಗಿಂತ ಮೊದಲೇ ಹೋಗಿ ಆಸನಗಳಲ್ಲಿ ಕುಳಿತುಕೊಳ್ಳ ಬಹುದು.ಜತೆಗೆ ನಿಲ್ದಾಣಗಳಲ್ಲಿ ರೈಲುಗಳು ಬರುವ ಘೋಷಣೆಯ ಜತೆಗೆ, ಈ ಕುರಿತ ಮಾಹಿತಿ ನೀಡಲಾಗುತ್ತದೆ. ಮೆಟ್ರೋ ರೈಲಿನಲ್ಲಿ ಒಂದು ಬೋಗಿಯಲ್ಲಿ ನಾಲ್ಕು ದ್ವಾರಗಳಂತೆ 3 ಬೋಗಿಗಳಲ್ಲಿ ಒಟ್ಟು 12 ದ್ವಾರ ಗಳಿವೆ. ಆರು ಬೋಗಿಯ ರೈಲಿನಲ್ಲಿ ಮುಂಭಾಗದ ಬೋಗಿ ಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಆರು ಬೋಗಿ ರೈಲನ್ನು ಬೈಯ್ಯಪ್ಪನಹಳ್ಳಿ ಡಿಪೋದಲ್ಲಿ ಇರಿಸಿ 85 ತಂತ್ರಾಂಶಗಳನ್ನು ಅಳವಡಿಸಲಾಗುತ್ತದೆ. ಬಳಿಕ ಡಿಪೋದ ಹಳಿಯಲ್ಲಿ ಸಂಚಾರ ನಡೆಸಿ ಪರೀಕ್ಷಿಸಲಾಗುತ್ತದೆ.
Comments