ಕೆ ಎಸ್ ಪುಟ್ಟಣ್ಣಯ್ಯನವರ ಅಂತಿಮ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್
ರೈತ ಮುಖಂಡ ಕೆ ಎಸ್ ಪುಟ್ಟಣ್ಣಯ್ಯ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಪುಟ್ಟಣ್ಣಯ್ಯ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ದರ್ಶನ್, ಪುಟ್ಟಣ್ಣಯ್ಯ ಅವರ ಪತ್ನಿ ಮತ್ತು ಪುತ್ರ ದರ್ಶನ್ ಗೆ ಸಾಂತ್ವನ ಹೇಳಿದರು.
ವಿದೇಶದಲ್ಲಿರುವ ಸಂಬಂಧಿಕರು ಬರುವವರೆಗೆ ಅಂತ್ಯಕ್ರಿಯೆ ನಡೆಸಲಾಗುವುದಿಲ್ಲ. ಬುಧವಾರ ಮಧ್ಯಾಹ್ನದ ವೇಳೆಗೆ ಹಿಂದು ಸಂಪ್ರದಾಯದಂತೆ ವಿಧಿವಿಧಾನ ನಡೆಸಲಾಗುವುದು. ಈ ಹಿಂದೆಯೂ ನಮ್ಮ ತಂದೆಗೆ ಹೃದಯಾಘಾತವಾಗಿತ್ತು. ಬೆಂಗಳೂರಿನಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಿದ್ದೆ ಆದರೆ ಆರೋಗ್ಯದಲ್ಲಿ ಯಾವುದೇ ಏರುಪೇರು ಇರಲಿಲ್ಲ. ನಾನು ಅವರ ಮಗ ಎನ್ನುವುದಕ್ಕಿಂತ ಅವರ ಅಭಿಮಾನಿ ಎಂದು ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ತಿಳಿಸಿದರು. ಪತ್ನಿ ಸುನೀತ ಮಾತನಾಡಿ, ನೆನ್ನೆಯಷ್ಟೇ ಸಾಮೂಹಿಕ ವಿವಾಹದಲ್ಲಿ ಭಾಗವಸಿಸಿದ್ದೆವು. ಆದರೆ ಈಗ ಹೀಗಾಗಿದೆ. ಅಭಿಮಾನಿಗಳು, ಕಾರ್ಯಕರ್ತರು ದ್ಯುತಿಗೆಡಬಾರದು. ಶಾಂತ ರೀತಿಯಲ್ಲಿ ವರ್ತಿಸಿ ಅಂತ್ಯಕ್ರಿಯೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
Comments