ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಟಾಂಗ್ ಕೊಟ್ಟ ನಟ ಜಗ್ಗೇಶ್

ಟ್ವಿಟರ್ ನಲ್ಲಿ ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ಅನಂತ್ ಕುಮಾರ್ ಹೆಗ್ಡೆ ವ್ಯಾಕರಣ ಬದ್ಧವಾಗಿ ಕನ್ನಡ ಮಾತನಾಡುತ್ತಾರೆ ನನಗಿಷ್ಟವಾದರು. ಅಂದ ಮಾತ್ರಕ್ಕೆ ಬೇರೆ ಭಾಗದವರಿಗೆ ಕನ್ನಡ ಬರೋಲ್ಲಾ ಎಂದು ಭಾವಿಸದಿರಿ. ಕರ್ನಾಟಕದ ಒಂದೊಂದು ಪ್ರಾಂತ್ಯಕ್ಕೂ ಒಂದು ಸೊಗಡಿದೆ. ಆ ಪ್ರಾಂತ್ಯದ ಅನುಸಾರ ಸೊಗಡು ನಾಲಿಗೆಯಲ್ಲಿರುತ್ತದೆ. ಮಾತನಾಡುವಷ್ಟೇ ಬರವಣಿಗೆ ಕಲಿಯಿರಿ ಎನ್ನಿ. ಹಂಗಿಸಬೇಡಿ. ನೀವು ಮಂತ್ರಿ ಸಾಮಾನ್ಯನಲ್ಲ ಎಂದು ಹೇಳಿದ್ದಾರೆ.
ಶುದ್ಧ ಕನ್ನಡ ಎಲ್ಲೂ ಇಲ್ಲ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡದವರನ್ನು ಹೊರತುಪಡಿಸಿದರೆ, ಇತರರಿಗೆ ಸರಿಯಾಗಿ ಕನ್ನಡ ಮಾತನಾಡುವ ಯೋಗ್ಯತೆಯೇ ಇಲ್ಲವೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿರುವುದಕ್ಕೆ ಬಿ.ಜೆ.ಪಿ. ನಾಯಕ ಹಾಗೂ ನಟ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.ಅನಂತ್ ಕುಮಾರ್ ಹೆಗ್ಡೆಯವರೇ ನಾನು ತುಮಕೂರು ಜಿಲ್ಲೆ ಗ್ರಾಮೀಣ ಭಾಗದವನು. ನಮ್ಮದು ಗ್ರಾಮೀಣ ಕನ್ನಡ. ಮನೆಯಲ್ಲಿ ಗ್ರಾಮೀಣ ಒಕ್ಕಲಿಗ ಮನೆತನದ ಭಾಷೆಯೇ ನಾನು ಮಾತನಾಡೋದು. ನನ್ನ ಕಲಾಕ್ಷೇತ್ರದಲ್ಲಿ ಎಲ್ಲಾ ವರ್ಗದ ಭಾಷೆ ತಪ್ಪಿಲ್ಲದೇ ಬಳಸುವೆ. ಇದಕ್ಕೆ ವ್ಯಾಕರಣದ ತಾಲೀಮು ಬೇಕು. ಅದು ಇದೆ. ನಮ್ಮ ಕನ್ನಡದ ಮಕ್ಕಳಿಗೆ ವ್ಯಾಕರಣ ಬದ್ಧ ಕನ್ನಡ ಕಲಿಯಲು ಪ್ರೇರೇಪಿಸಿ ಎಂದು ಜಗ್ಗೇಶ್ ತಿಳಿಸಿದ್ದಾರೆ.
Comments