ಬೆಂಗಳೂರಿನಲ್ಲಿ ಕಟ್ಟಡ ಕುಸಿತಕ್ಕೆ ಐವರು ಬಲಿ

17 Feb 2018 12:52 PM | General
336 Report

ನಗರದ ಕಸವನಹಳ್ಳಿಯಲ್ಲಿ ಕಟ್ಟಡ ಕುಸಿತದ ಸ್ಥಳದಲ್ಲಿ ಎರಡು ದಿನಗಳಿಂದ ಅಗ್ನಿಶಾಮಕ ಹಾಗೂ ಎನ್ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.  ರಾಯಚೂರು ಮೂಲದ ರಾಜುಸಾಬ್ ಎಂಬ ಕಾರ್ಮಿಕನ ಮೃತ ದೇಹ ಪತ್ತೆಯಾಗಿತ್ತು. ಇದುವರೆಗೂ ಕಟ್ಟಡ ದುರಂತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.

 ಘಟನೆಯಲ್ಲಿ ಒಟ್ಟು 16 ಮಂದಿ ಗಾಯಗೊಂಡಿದ್ದವರನ್ನು ರಕ್ಷಣೆ ಮಾಡಲಾಗಿದೆ. ಒಟ್ಟು ಕಟ್ಟಡದಲ್ಲಿ 22 ಮಂದಿ ಕೆಲಸ ಮಾಡುತ್ತಿದ್ದರು ಅಂತ ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕಾರ್ಮಿಕರ ಮಾಹಿತಿ ಪ್ರಕಾರ ಇನ್ನೂ ಇಬ್ಬರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಂದೂರು ಪೊಲೀಸರು 304 ಅಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರ್ರಕರಣದ ಪ್ರಮುಖ ಆರೋಪಿ ಹಾಗೂ ಕಟ್ಟಡದ ಮಾಲೀಕ ರಫಿಕ್ ಪರಾರಿಯಾಗಿದ್ದಾನೆ. ಆದರೆ ರಫಿಕ್ ಪತ್ನಿ ಸಮೀರಾ ಹಾಗೂ ಬಿಬಿಎಂಪಿಯ ಮಹಾದೇವಪುರ ವಲಯದ ಉಪ ಅಭಿಯಂತರ ಮುನಿರೆಡ್ಡಿ ವಶಕ್ಕೆ ಪಡೆದಿರೋ ಬೆಳ್ಳಂದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Edited By

Shruthi G

Reported By

Madhu shree

Comments