ಗ್ರಾಹಕರಿಗೆ ಭರ್ಜರಿ ಆಫರ್ ಕೊಟ್ಟ ಜಿಯೋ
ಜಿಯೋ ಕಂಪನಿ ಶುರುವಾದಾಗಿನಿಂದ ಗ್ರಾಹಕರಿಗೆ ಒಂದಲ್ಲ ಒಂದು ಆಫರ್ ಗಳನ್ನೂ ನೀಡುತ್ತಲೇ ಬರುತ್ತಿದೆ. ಇತರ ಕಂಪನಿಗಳಿಗೆ ಸ್ಪರ್ಧೆ ನೀಡುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. ಅದೇ ರೀತಿ ಇದೀಗ ಒಂದು ಆಫರ್ ಬಿಟ್ಟಿದೆ. ಆಫರ್'ಗೆ ಜಿಯೋ ಫುಟ್ಬಾಲ್ ಆಫರ್ ಎಂದು ಹೆಸರಿಟ್ಟಿದೆ.
ಇದರಲ್ಲಿ ಯಾವ ಗ್ರಾಹಕರು ತಮ್ಮ ಜಿಯೋ ನೆಟ್ವರ್ಕ್'ನಲ್ಲಿ 198 ಅಥವಾ 299 ರು. ರಿಚಾರ್ಜ್ ಮಾಡಿಸಿಕೊಂಡು 4ಜಿ ಡಿವೈಸ್ ಆಕ್ಟಿವೇಟ್ ಮಾಡಿಕೊಂಡವರಿಗೆ 2,200 ಕ್ಯಾಶ್ ಬ್ಯಾಕ್ ಆಫರ್ ನೀಡಿದೆ. ಆದರೆ ಪ್ರೀಪೇಯ್ಡ್ ಗ್ರಾಹಕರು 2018 ಮಾರ್ಚ್ 31ರೊಳಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕು. ಈ ಆಫರ್ ಕ್ಸಿಯೋಮಿ, ಸ್ಯಾಮ್'ಸಂಗ್, ಮೊಟೊ, ಆಸುಸ್, ಹುವಾಯ್, ಪ್ಯಾನಸೋನಿಕ್, ಎಲ್ಜಿ, ನೋಕಿಯಾ, ಮೈಕ್ರೋಮ್ಯಾಕ್ಸ್ ಸೇರಿದಂತೆ ಇತರೆ ಫೋನ್'ಗಳಲ್ಲಿ ಲಭ್ಯವಾಗಲಿದೆ. ಮೊದಲು 198 ಅಥವಾ 299 ಯಶಸ್ವಿ ರಿಚಾರ್ಜ್'ಗೆ 44 ವೋಚರ್ಸ್ ಪ್ಲಾನಲ್ಲಿ ಮೈ ಜಿಯೋ ಆಪ್'ಗೆ 50 ರು. ಕ್ರೆಡಿಟ್ ಆಗಲಿದೆ.
Comments