ಸುಪ್ರೀಂ ತೀರ್ಪು : ಕರ್ನಾಟಕಕ್ಕೆ ವರವಾದ ಕಾವೇರಿ

ಕನ್ನಡಿಗರಿಗೆ ತಲೆ ಬಿಸಿ ಮಾಡಿದ್ದ ಕಾವೇರಿ ವಿವಾದಕ್ಕೆ ಬ್ರೇಕ್ ಹಾಕಿದ ಸುಪ್ರೀಂ. ಕನ್ನಡಿಗರಿಗೆ ಕಾವೇರಿ ಸಂತಸ ತಂದಿದ್ದಾಳೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಇಂದು ಮಹತ್ವದ ತೀರ್ಪು ನೀಡಿದ್ದು, ರಾಜ್ಯಕ್ಕೆ ಪರೋಕ್ಷವಾಗಿ ಗೆಲುವು ಸಿಕ್ಕಿದೆ.
ರಾಜ್ಯದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕರ್ನಾಟಕದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿ, ಹೆಚ್ಚುವರಿಯಾಗಿ 14.5 ಟಿ.ಎಂ.ಸಿ. ನೀರು ನೀಡಿದೆ. ತಮಿಳುನಾಡಿಗೆ ನೀರಿನ ಪ್ರಮಾಣ ಕಡಿತ ಮಾಡಿದೆ. ಬೆಂಗಳೂರಿಗೆ 4.5 ಟಿಎಂಸಿ ಹೆಚ್ಚುವರಿ ಕುಡಿಯುವ ನೀರು ಬಳಸಲು ಮತ್ತು ಕರ್ನಾಟಕದಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲು ಅವಕಾಶ ನೀಡಿದ್ದು, ಇದರಿಂದಾಗಿ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಂಡ್ಯ, ಮೈಸೂರಿನಲ್ಲಿ ಜನರೆಲ್ಲಾ ಬೀದಿಗಿಳಿದು ಸಂಭ್ರಮಿಸಿದ್ದಾರೆ. ಅನೇಕ ಕಡೆಗಳಲ್ಲಿ ಸಿಹಿ ಹಂಚಿ ಜನ ಸಂಭ್ರಮಾಚರಣೆ ನಡೆಸಿದ್ದಾರೆ.
Comments