ಕಾವೇರಿ ವಿವಾದದ ಅಂತಿಮ ತೀರ್ಪು : ಯಾರಿಗೆ ಒಲಿತಾಳೆ ಕಾವೇರಿ ?

ಕಾವೇರಿ ನೀರಿನ ಅಂತಿಮ ತೀರ್ಪಿನ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದೆಲ್ಲಡೆ ಬಂದೋಬಸ್ತು ಏರ್ಪಡಿಸಲಾಗಿದೆ. ತಮಿಳು ನಾಡಿನ ಬಸ್ ಸ್ತಗಿತಗೊಳಿಸಲಾಗಿದೆ. ಕಾವೇರಿ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ ಯಾವ ರಾಜ್ಯಕ್ಕೆ ಕಾವೇರಿ ಸಿಹಿ, ಯಾವ ರಾಜ್ಯಕ್ಕೆ ಕಹಿ ಕೊಡುತ್ತಾಳೋ ನೋಡಬೇಕಿದೆ.
ಬೆಳಿಗ್ಗೆ 10-30 ರ ಸುಮಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಅಂತಿಮ ತೀರ್ಪು ಪ್ರಕಟಿಸಲಿದೆ. ಮಂಡ್ಯ ಜಿಲ್ಲೆಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭದ್ರತೆಗಾಗಿ 8 ಡಿ ವೈ ಎಸ್ ಪಿ, 25 ಸಿಪಿಐ, 60 ಪಿ ಎಸ್ ಐ, 150 ಎ ಎಸ್ ಐ ಹಾಗೂ 1300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದ್ದು, ತೀರ್ಪಿನ ಬಳಿಕ ಯಾವುದೇ ಮೆರವಣಿಗೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ.
Comments