ನೀವು ರ‍್ಯಾoಕ್ ಸ್ಟೂಡೆಂಟ್ ಆಗ್ಬೇಕಾ ? ಹಾಗಿದ್ರೆ ಈ ನಾಲ್ಕು ಸಲಹೆ ಅನುಸರಿಸಿ..!

ಎಲ್ಲಾ ವಿದ್ಯಾರ್ಥಿಗಳಿಗೂ ತಾವು ಡಿಸ್ಟಿಂಗ್ ಶೇನ್, ರ‍್ಯಾoಕ್ ನಲ್ಲಿ ಪಾಸಾಗಬೇಕೆಂಬ ಆಸೆ ಇರುತ್ತೆ, ಆದ್ರೆ ಹೇಗೆ ಅನ್ನೋದು ಗೊತ್ತಿರಲ್ಲ.ಆದ್ರೆ ನೀವು ಅಂದುಕೊಂಡ ಹಾಗೆ ಒಳ್ಳೆ ಮಾರ್ಕ್ಸ್ ಪಡೀಬೇಕು ಅಂದ್ರೆ ನೀವು ಈ ನಾಲಕ್ಕೂ ಸಲಹೆಗಳನ್ನೂ ಅನುಸರಿಸಬೇಕು.
* ಮೊದಲನೆಯದು ನೀವು ಟಿವಿ, ಕಂಪ್ಯೂಟರ್ , ಮೊಬೈಲ್ ಮತ್ತಿರ ವಸ್ತುಗಳಿಂದ ದೂರವಿರಿ.ಓದುವಾಗ ಬೇರೆ ಯಾವುದೇ ಯೋಚನೆಗಳನ್ನು ಮಾಡ್ಬೇಡಿ, ಅಲ್ಲದೆ ನೀವು ಗ್ರಂಥಾಲದಂತಹ ಪ್ರಶಾಂತ ಸ್ಥಳಗಳಲ್ಲಿ ಓದುವುದರಿಂದ ನಿಮ್ಮ ಗಮನ, ಆಸಕ್ತಿ ಹೆಚ್ಚುತ್ತದೆ.
* ನೀವು ಓದುವಾಗ ಪ್ರತಿ 45 ನಿಮಿಷಕ್ಕೆ 12 ನಿಮಿಷ ವಿರಾಮತೆಗೆದುಕೊಂಡು ಓದುವುದು ಉತ್ತಮ. ಏಕೆಂದರೆ ನಮ್ಮ ಮೆದುಳಿಗೆ
12 ನಿಮಿಷ ವಿರಾಮ ತೆಗೆದುಕೊಳ್ಳುವುದರಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂದು ಕೆಲವು ರಿಸರ್ಚರ್ಸ್ ಗಳು ತಿಳಿಸಿದ್ದಾರೆ. ಈ ವಿರಾಮದಿಂದ ಮೆದುಳಿಗೆ ಸುಸ್ತಾಗುವುದಿಲ್ಲ, ಆಗ ಓದಲು ಆಸಕ್ತಿ ಹೆಚ್ಚುತ್ತದೆ.
* ಓದುವ ಸಮಯದಲ್ಲಿ ಮ್ಯೂಸಿಕ್ ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಡಿ. ನೀವು ಈ ರೀತಿ ಮಾಡಿದರೆ ನಮ್ಮ ಮೆದುಳಿಗೆ ನಾವು ಒಮ್ಮೆ ಎರಡೆರಡು ಕೆಲಸ ಮಾಡಲು ಕೊಟ್ಟರೆ ಮೆದುಳಿಗೆ ಬೇಗ ಸುಸ್ತಾಗಿ ಓದುವ ಆಸಕ್ತಿ ಕಡಿಮೆಯಾಗುತ್ತದೆ. ಓದುವ ಸಮಯ ದಲ್ಲಿ ಓದಿನ ಮೇಲೆ ಮಾತ್ರ ಹೆಚ್ಚು ಗಮನ ಹರಿಸಬೇಕು.
* ಓದಿದ ಬಳಿಕ ನೀವು ಏನನ್ನು ಓದಿದ್ದೀರಾ ಅದನ್ನೊಮ್ಮೆ ನೆನೆಪಿಸಿಕೊಂಡು ನಿಮ್ಮ ಕಲ್ಪನಾ ಶಕ್ತಿಯಿಂದ ಅದನ್ನು ಇಮ್ಯಾಜಿನೇಶನ್ ಮಾಡಿಕೊಳ್ಳಿ, ಇದರಿಂದ ನೀವು ಓದಿರುವುದು ನಿಮ್ಮ ಮೆದುಳಿನಲ್ಲಿ ಮತ್ತೊಮ್ಮೆ ಪುನರಾವರ್ತನೆ(ರಿವಿಶಷನ್ ) ಆಗುತ್ತದೆ. ಈ ಎಲ್ಲಾ ನಾಲ್ಕು ಸಲಹಾ ಕ್ರಮಗಳನ್ನು ನೀವು ಅನುಸರಿಸಿದರೆ ಈ ಬಾರಿ ರ‍್ಯಾoಕ್ ಪಡೆಯುವುದರಲ್ಲಿ ಡೌಟ್ಟಿಲ್ಲ.
Comments