ಚುನಾವಣಾ ಪ್ರಚಾರದಲ್ಲಿ ರಾಹುಲ್ ದ್ರಾವಿಡ್..!!
ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರನ್ನು ತಮ್ಮತ ಸೆಳೆಯಲು ಸ್ಟಾರ್ ಪ್ರಚಾರ ಮಾಡುವುದು ಸಹಜವಾಗಿದೆ. ಮಾಜಿ ಕ್ರಿಕೆಟಿಗ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಈ ಬರಿ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದರೆ ಯಾವುದೇ ಪಕ್ಷದ ಪರವಾಗಿ ಅಲ್ಲ ಅಥವಾ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ಮಾಡುತ್ತಿಲ್ಲ, ಅವರು ಸಹ ಸ್ಪರ್ಧಿಸುತ್ತಿಲ್ಲ ಆದರೆ ದ್ರಾವಿಡ್ ಪ್ರಚಾರ ಮಾಡಲಿರುವುದು ಚುನಾವಣೆಯ ಬಗ್ಗೆ. ಹೌದು, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ತಮ್ಮ ಮತದಾನದ ಹಕ್ಕನ್ನು ಪೂರ್ಣ ಪ್ರಮಾದಲ್ಲಿ ಬಳಸಿಕೊಂಡು ತಮ್ಮ ಜವಾಬ್ದಾರಿ ಮೆರೆಯ ಬೇಕು ಎಂದು ಹೇಳಲಿದ್ದಾರೆ. ಸದ್ಯ ಚುನಾವಣಾ ಆಯೋಗ ರಾಜ್ಯ ಚುನಾವಣಾ ಪ್ರಚಾರಕ್ಕಾಗಿ ರಾಯಭಾರಿಗಳ ಹುಡುಕಾಟದಲ್ಲಿದ್ದು, ಆಯೋಗದ ಪಟ್ಟಿಯಲ್ಲಿ ದ್ರಾವಿಡ್ ಹೆಸರು ಮುಂಚೂಣಿಯಲ್ಲಿರುವ ಬಗ್ಗೆ ಮಾಹಿತಿ ಬಂದಿವೆ.
Comments