ಜಮೀನಿನ ಸುತ್ತ ಸನ್ನಿ ಲಿಯೋನ್ ಚಿತ್ರಗಳ ಫ್ಲೆಕ್ಸ್ ಹಾಕಿಸಿದ ರೈತ!

ಬೆಳೆದ ಫಸಲಿಗೆ ಜನರ ಕೆಟ್ಟ ದೃಷ್ಟಿ ತಾಗಬಾರದು ಎಂದು ಎಲ್ಲರು ಬೇಡರು ಬೊಂಬೆ ಇಡುವುದನ್ನು ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ರೈತ ತನ್ನ ಬೆಲೆ ಪಸಲನ್ನು ಕಂಡು ಹೊಟ್ಟೆ ಉರಿ ಪಡುತ್ತಾರೆ ಅದಕ್ಕಾಗಿ ಇಲ್ಲೊಬ್ಬ ರೈತ ಸನ್ನಿ ಲಿಯೋನಾ ಫ್ಲೆಕ್ಸ್ ಗಳನ್ನು ಜಮೀನಿನ ಸುತ್ತ ಇಟ್ಟು ಜನರ ಕಂಗೆಣ್ಣಿನಿಂದ ತನ್ನ ಬೆಳೆಯನ್ನು ಕಾಪಾಡಿಕೊಳ್ಳುತ್ತಿದ್ದಾನೆ.
ದಾರಿಯಲ್ಲಿ ಹೋಗುವವರು ಆತನ ಬೆಳೆಯ ಮೇಲೆ ಗಮನ ಹರಿಸದೆ ಸನ್ನಿ ಲಿಯೋನಾ ಫ್ಲೆಕ್ಸ್ ಗಳನ್ನು ನೋಡಿಕೊಂಡು ಹೋಗುವುದರಿಂದ ಈತನ ಬೆಳೆ ಸಮೃದ್ಧವಾಗಿದೆ. ರೈತ ಚೆಂಚು ರೆಡ್ಡಿ 10 ಎಕರೆ ಜಮೀನನ್ನು ಹೊಂದಿದ್ದಾರೆ. ಇದರಲ್ಲಿ ತರಕಾರಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ನಮ್ಮ ಜಮೀನು ರಸ್ತೆ ಬದಿಯಲ್ಲಿದ್ದು, ಜನರ ಕೆಟ್ಟ ದೃಷ್ಟಿ ಬೆಳೆದ ಫಸಲಿನ ಮೇಲೆ ಬೀಳುತ್ತದೆ. ಇದರಿಂದ ಫಸಲು ಸರಿಯಾಗಿ ಬೆಳವಣಿಗೆ ಕಾಣದೇ ಸೊರಗಿ ಹೋಗುತ್ತಿತ್ತು. ಈ ಬಗ್ಗೆ ಗೆಳೆಯರನ್ನು ಕೇಳಿದಾಗ ಅವರು ಸನ್ನಿ ಲಿಯೋನ್ ಫ್ಲೆಕ್ಸ್ ಹಾಕಿಸುವಂತೆ ಸಲಹೆ ನೀಡಿದರು' ಎಂದು ಸ್ಥಳೀಯ ಮಾಧ್ಯಮಗಳಿಗೆ ಚೆಂಚು ರೆಡ್ಡಿ ತಿಳಿಸಿದ್ದಾರೆ. ಚೆಂಚು ರೆಡ್ಡಿ ತಮ್ಮ ಹತ್ತು ಎಕರೆ ಜಮೀನಿನ ಸುತ್ತ 20ಕ್ಕೂ ಹೆಚ್ಚು ಫ್ಲೆಕ್ಸ್ ಗಳನ್ನು ಹಾಕಿದ್ದಾರೆ.
Comments