ವಿಜಯ್ ಮಲ್ಯ ವಾರಕ್ಕೆ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ ?

ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಲಂಡನ್ ನಲ್ಲಿ ಐಷಾರಾಮಿ ಜೀವನ ಸಾಗಿಸ್ತಿದ್ದಾರೆ. ಸಾಲ ಮರುಪಾವತಿ ಮಾಡಲು ತಮ್ಮ ಬಳಿ ಹಣವೇ ಇಲ್ಲ ಅನ್ನೋದು ಮಲ್ಯ ವಾದ. ಈವರೆಗೆ ಮಲ್ಯ ವಾರಕ್ಕೆ 5000 ಪೌಂಡ್ ಅಂದ್ರೆ 4.5 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ರು.
ಇನ್ಮೇಲೆ 18,325 ಪೌಂಡ್ ಅಂದ್ರೆ 16 ಲಕ್ಷ ರೂಪಾಯಿ ವೆಚ್ಚ ಮಾಡಲು ಕೋರ್ಟ್ ಅನುಮತಿ ನೀಡಿದೆ. ಸಿಂಗಾಪುರ ಮೂಲದ ಬಿಓಸಿ ಏರ್ ಲೈನ್ಸ್ ಗೆ 90 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಬ್ರಿಟನ್ ಕೋರ್ಟ್ ವಿಜಯ್ ಮಲ್ಯಗೆ ಸೂಚಿಸಿದೆ. ಕಳೆದ ಏಪ್ರಿಲ್ ನಲ್ಲಿ ಲಂಡನ್ ನಲ್ಲೇ ಮಲ್ಯರನ್ನು ಬಂಧಿಸಲಾಗಿತ್ತು. ಸದ್ಯ ಗಡಿಪಾರು ಸಂಬಂಧ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ.
Comments