ಕರಾವಳಿ ಸಾಂಪ್ರದಾಯಕ ಕ್ರೀಡೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ

12 Feb 2018 6:37 PM | General
493 Report

ಕರಾವಳಿ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಕಂಬಳ ನಿಷೇಧಿಸುವಂತೆ ಪೆಟಾ(ಪ್ರಾಣಿ ದಯಾ ಸಂಘ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತಡೆ ನೀಡಲು ನಿರಾಕರಿಸಿದೆ.

ಈ ಸಂದರ್ಭದಲ್ಲಿ ಕಂಬಳವನ್ನು ನಿಷೇಧಿಸಬೇಕೆಂದು ಪೆಟಾ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪ್ರತಿವಾದ ಮಂಡಿಸಿದ ರಾಜ್ಯದ ಪರ ವಕೀಲರು, ಕಂಬಳ ಸಂಬಂಧ ಮಸೂದೆ ಅಂಕಿತಕ್ಕೆ ರಾಷ್ಟ್ರಪತಿಗೆ ಕಳುಹಿಸಲಾಗಿದೆ ಎಂದರು. ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿದೆ.

Edited By

Shruthi G

Reported By

Madhu shree

Comments