ಬೌ ಬೌ ಬಿರಿಯಾನಿ ಹೋಯ್ತು ಮಿಯಾವ್ ಮಿಯಾವ್ ಬಿರಿಯಾನಿ ಬಂತು..!

12 Feb 2018 3:13 PM | General
820 Report

ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಾದಂತೆಲ್ಲ ಜನರು ಹೆಚ್ಚು ಹಣ ಸಂಪಾದಿಸುವ ಹಿನ್ನೆಲೆ ಕುರಿ, ಕೋಳಿ, ಮೇಕೆ ಅಲ್ಲದೆ ಇನ್ನಿತರ ಪ್ರಾಣಿಗಳ ಮಾಂಸವನ್ನು ಮಾರಾಟ ಮಾಡುತ್ತಿರುವುದು ದಿನವೂ ಸಹ ಬೆಳಕಿಗೆ ಬರುತ್ತಲೇ ಇದೆ. ಇದರಿಂದ ಬುದ್ದಿಕಲಿಯದ ಜನರು ಹಣಗಳಿಸಬೇಕೆಂಬ ದುರಾಸೆಯಿಂದ ಅಡ್ಡದಾರಿ ಹಿಡಿದಿದ್ದಾರೆ.

ಹೌದು ಬೌ ಬೌ ಬಿರಿಯಾನಿ ಕೇಳಿದ್ದೇವೆ,ಇದಾವುದೂ ಮಿಯಾವ್ ಮಿಯಾವ್ ಬಿರಿಯಾನಿ ಅಂತೀರಾ ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಮಾಹಿತಿ. ತಮಿಳುನಾಡಿನ ತಿರುಮುಲ್ಲೈವಯಲ್ನಲ್ಲಿ 12ಕ್ಕೂ ಹೆಚ್ಚು ಬೆಕ್ಕುಗಳನ್ನು ರಕ್ಷಣೆ ಮಾಡಲಾಗಿದೆ. ಬೆಕ್ಕಿನ ಮಾಂಸವನ್ನು ಬಿರಿಯಾನಿಗೆ ಬಳಸಲಾಗ್ತಾಯಿತ್ತು. ಬೆಕ್ಕಿನ ಮಾಂಸ ಮಾರಾಟ ದಂಧೆ ನಡೆಸುತ್ತಿದ್ದ ಸ್ಥಳೀಯ ಬುಡಕಟ್ಟು ಜನಾಂಗದವರ ಬಳಿಯಿದ್ದ ಬೆಕ್ಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇಲ್ಲಿನ ಗ್ರಾಹಕರಿಗೆ ತಾವು ಚಪ್ಪರಿಸುತ್ತಿರುವುದು ಬೆಕ್ಕಿನ ಮಾಂಸ ಎಂಬ ಅರಿವೇ ಇರಲಿಲ್ಲ. ಅನೇಕ ವರ್ಷಗಳಿಂದಲೂ ಇಲ್ಲಿನ ಕೆಲವು ರಸ್ತೆಗಳಲ್ಲಿ ಕ್ಯಾಟ್ ಮೀಟ್ ದಂಧೆ ಎಗ್ಗಿಲ್ಲದೇ ನಡೆಯುತ್ತಿತ್ತು ಎಂದು ಪೊಲೀಸ್ ರ ತನಿಖೆಯ ವೇಳೆ ತಿಳಿದು ಬಂದಿದೆ.

Edited By

Shruthi G

Reported By

Madhu shree

Comments