ಇನ್ನು ಮುಂದೆ ನಮ್ಮದೇಹದಿಂದಲೇ ಮೊಬೈಲ್ ಚಾರ್ಜ್ ಮಾಡಬಹುದು..!!
ಫೋನ್ ಚಾರ್ಜ್ ಖಾಲಿ ಆದಾಗ ಚಾರ್ಜ್ ಮಾಡಲು ತುಂಬಾ ಪರಿತಪಿಸುತ್ತೇವೆ. ಎಲ್ಲಾದರೂ ಹೋದಾಗ ನಿಮ್ಮ ಫೋನ್ ಫುಲ್ ಡೆಡ್ ಆದಾಗ ತಲೆಯೇ ಓಡದಂತಾಗಿ ತಲೆ ನೋವು ಎದುರಿಸೋದು ಕಷ್ಟಕರವಾಗಿರುತ್ತದೆ. ಅಲ್ಲದೆ ಇತ್ತೀಚಿಗೆ ಈ ಸಮಸ್ಯೆ ಹೆಚ್ಚಾಗಿದೆ.
ಈ ಎಲ್ಲ ಜಂಜಾಟಗಳಿಗೆ ಬ್ರೇಕ್ ಹಾಕಲು ವಿಜ್ಞಾನಿಗಳು ಟ್ಯಾಬ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಟ್ಯಾಬ್ ಮಾನವನ ದೇಹದ ಚಲನೆಯಿಂದಲೇ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಇದರಿಂದ ನೀವು ನಿಮ್ಮ ಸಾಧನಗಳನ್ನು ಚಾರ್ಚ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಬೇಕಾದ ಅಗತ್ಯವಿರುವುದಿಲ್ಲ. ಈ ರೀತಿಯಾದ ಸಾಧನದ ಬಗ್ಗೆ ಅಮೆರಿಕದ ಬೊಫೆಲೋ ವಿವಿಯ ಪ್ರಧ್ಯಾಪಕರು ಹೇಳುವುದೇನೆಂದರೆ ನಮ್ಮ ದೇಹವೇ ಇನ್ನು ಮುಂದೆ ಶಕ್ತಿಯ ಮೂಲವಾಗಲಿದೆ. ನಮ್ಮ ದೇಹದಲ್ಲಿ ಸಾಕಷ್ಟು ಶಕ್ತಿ ಉತ್ಪಾದನೆಯಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಇದು ಹೆಚ್ಚಿನ ಪ್ರಮಾಣದಲ್ಲಿ ವೆಚ್ಚವನ್ನೂ ಕೂಡ ಬೇಡುವುದಿಲ್ಲ ಎಂದಿದ್ದಾರೆ.
Comments