ಶಾಲಾ ಮಕ್ಕಳಿಗೆ ಮಾತ್ರವಲ್ಲ ಇನ್ಮುಂದೆ ಶಿಕ್ಷಕರಿಗೂ ಕೂಡ..!
ಶಾಲಾ ಮಕ್ಕಳು ದಿನವೂ ಸಮವಸ್ತ್ರ ಧರಿಸುವುದು ನಾವು ಕೆಣುತ್ತಿದ್ದೇವೆ. ಆದ್ರೆ ಇನ್ಮುಂದೆ ಮಕ್ಕಳ ಜೊತೆ ಶಿಕ್ಷಕರು ಸಹ ಸಮವಸ್ತ್ರ ಧರಿಸಬೇಕು. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಅದೇ ರೀತಿ ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡ್ರೆಸ್ ಕೋಡ್ ಜಾರಿಗೆ ತರಲು ನಿಯಮ ರೂಪಿಸಲಾಗಿದೆ.
ಶಿಕ್ಷಕರ ಸಮವಸ್ತ್ರ ಹೇಗಿರಲಿದೆ ಗೊತ್ತಾ ? ಶಿಕ್ಷಕರು ಆಕಾಶ ನೀಲಿ ಬಣ್ಣದ ಜಾಕೆಟ್, ಶಿಕ್ಷಕಿಯರು ಮೆರೂನ್ ಕಲರ್ ಜಾಕೆಟ್ ಧರಿಸಬೇಕಿದೆ, ಜಾಕೆಟ್ ಮೇಲ್ಭಾಗದಲ್ಲಿ ರಾಷ್ಟ್ರ ನಿರ್ಮಾತ ಎಂದು ಬರೆದಿರಬೇಕೆಂದು ಮಧ್ಯಪ್ರದೇಶ ಶಿಕ್ಷಣ ಇಲಾಖೆ ಆದೇಶಿಸಿದೆ.
ಶಿಕ್ಷಕರಲ್ಲಿ ಸಮಾನತೆ ಕಾಯ್ದುಕೊಳ್ಳಲು ಡ್ರೆಸ್ ಕೋಡ್ ಜಾರಿಗೆ ತರಲಾಗ್ತಿದೆ ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
Comments