ಎಚ್ ಡಿಕೆ, ಎಚ್ ಡಿಡಿ ಆಗಮನಕ್ಕಾಗಿ ಸಜ್ಜಾದ ತೀರ್ಥಹಳ್ಳಿ…!!



ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸಾಧ್ಯವಾಗದ ಕಾರಣ ನಿನ್ನೆ ತೀರ್ಥಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಹೂಡಬೇಕಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ಯವ್ಯ ರದ್ದಾಯಿತು.
ತೀರ್ಥಹಳ್ಳಿಯ ಕೋಣಂದೂರಿನ ಹೊಸಮನೆ ಗ್ರಾಮದಲ್ಲಿ ರೈತ ಸೋಮಪ್ಪನವರ ಮನೆಯಲ್ಲಿ ಹೆಚ್‌ಡಿಕೆ ವಾಸ್ತವ್ಯ ಹೂಡಬೇಕಿತ್ತು. ಎಚ್ ಡಿಕೆ ಜೊತೆ ಜೆಡಿಎಸ್ ವರಿಷ್ಠ ದೇವೇಗೌಡ ಕೂಡ ಆಗಮಿಸುವುದರಿಂದ ಇದು ತುಂಬಾ ಮಹತ್ವದಿಂದ ಕೂಡಿತ್ತು. ಎಚ್ ಡಿಕೆ ಅವರ ಗ್ರಾಮ ವಾಸ್ತವ್ಯ ರದ್ದಾಗಿದ್ದರಿಂದ ರೈತ ಸೋಮಪ್ಪನವರ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಧು ಬಂಗಾರಪ್ಪ, ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಆಗಮಿಸುವುದಾಗಿ ಹೇಳಿದರು. ಶಾಸಕ ಮಧು ಬಂಗಾರಪ್ಪ ಗ್ರಾಮ ವಾಸ್ತವ್ಯ ನಡೆಸಿದ್ದು, ಬಹುನಿರೀಕ್ಷಿತ ಗ್ರಾಮವಾಸ್ತವ್ಯ ಹವಾಮಾನ ವೈಪರೀತ್ಯದಿಂದ ಎಚ್ ಡಿಕೆ ಬಾರದೇ ಕಳೆಗುಂದಿತು. ಶಾಸಕ ಮಧು ಬಂಗಾರಪ್ಪನವರಿಗೆ, ಆರ್.ಎಂ. ಮಂಜುನಾಥ್ ಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದ್ದಾರೆ. ಇದಕ್ಕೂ ಮೊದಲು ಕೊಣಂದೂರಿನ ಜೆಡಿಎಸ್ ಕಚೇರಿಯನ್ನು ಮಧು ಬಂಗಾರಪ್ಪ ಉದ್ಘಾಟಿಸಿದರು.
ತೀರ್ಥಹಳ್ಳಿಗೆ ವಿಕಾಸಯಾತ್ರೆಯ ಜೆಡಿಎಸ್ ಬಸ್ ಆಗಮಿಸಿದೆ. ತಳಿರು ತೋರಣಗಳಿಂದ ತೀರ್ಥಹಳ್ಳಿ ಸಿಂಗಾರಗೊಂಡಿದೆ. ಎಲ್ಲೆಡೆ ಜೆಡಿಎಸ್ ಬಾವುಟಗಳು, ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಇಡೀ ಪಟ್ಟಣ ತಳಿರು, ತೋರಣದಿಂದ ಸಿಂಗಾರಗೊಂಡಿದೆ. ಎಲ್ಲೆಡೆ ಕುಮಾರಸ್ವಾಮಿ, ದೇವೇಗೌಡ, ಮಧು ಬಂಗಾರಪ್ಪ, ಮಂಜುನಾಥ ಗೌಡ, ಮದನ್ ಅವರ ಫೋಟೋಗಳು ರಾರಾಜಿಸುತ್ತಿವೆ. ನಗರದ ತುಂಬೆಲ್ಲಾ ಬಾಳೆಕಂಬಗಳನ್ನು ಕಟ್ಟಲಾಗಿದೆ. ಸುಮಾರು 30,000 ಮಂದಿಗೆ ಅಡುಗೆ ಸಿದ್ಧವಾಗುತ್ತಿದೆ. ತೀರ್ಥಹಳ್ಳಿಗೆ ಸಾವಿರಾರು ವಾಹನಗಳು ಹೆಚ್ಚುವರಿ ಆಗಮಿಸಲಿರುವುದರಿಂದ ಎಲ್ಲಾ ವಾಹನಗಳನ್ನು ಪಟ್ಟಣದ ಹೊರಭಾಗದಲ್ಲೇ ಪಾರ್ಕ್ ಮಾಡಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
Comments