ಶಿವರಾತ್ರಿ ಹಬ್ಬಕ್ಕೆ ಹಾಪ್ ಕಾಮ್ಸ್ ಮಳಿಗೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ..!!

ಹಬ್ಬ ದಿನಗಳಲ್ಲಿ ತರಕಾರಿ,ಹಣ್ಣುಗಳ ಬೆಲೆ ಬೆಲೆ ಗ್ರಾಹಕರ ತಲೆ ಬಿಸಿ ಮಾಡೋದಂತೂ ನಿಜ. ಆದರೆ ಹಬ್ಬಕ್ಕೆ ಹಣ್ಣು ತರಕಾರಿ ಬೇಕೇ ಬೇಕು ಅದರಲ್ಲೂ ಶಿವರಾತ್ರಿ ಹಬ್ಬಕೆ ಹಣ್ಣುಗಳಂತೂ ಬೇಕೇಬೇಕು. ಹಣ್ಣುಗಳ ಬೆಲೆ ಕೇಳಿದ್ರೆ ತಲೆತಿರುಗುವುದು ಗ್ಯಾರಂಟಿ. ಆದ್ರೆ ಈ ಬಾರಿ ಶಿವರಾತ್ರಿ ಹಬ್ಬಕ್ಕೆ ಹಾಗೇ ಆಗುವುದಿಲ್ಲ ಅದಕ್ಕೆ ಕಾರಣ ಹಾಪ್ ಕಾಮ್ಸ್ ತನ್ನ ಗ್ರಾಹಕರಿಗೊಂದು ಗುಡ್ ನ್ಯೂಸ್ ನೀಡಲಿದೆ.
ಹೌದು. ಹಾಪ್ ಕಾಮ್ಸ್ ನಲ್ಲಿ ತರಕಾರಿಗಳನ್ನ ಕೇವಲ ಹತ್ತು ರೂಪಾಯಿಗೆ ನೀಡಲಾಗ್ತಿದೆ. ಶಿವರಾತ್ರಿ ಹಬ್ಬದ ಸಲುವಾಗಿ ಜನತೆಗೆ ಅಗ್ಗದ ದರದಲ್ಲಿ ಹಾಪ್ ಕಾಮ್ಸ್ ನಲ್ಲಿ ತರಕಾರಿಗಳು ಸಿಗಲಿವೆ. ಮೂಲಂಗಿ, ಎಲೆಕೋಸು ಟೊಮೇಟೋ, ಸೌತೆಕಾಯಿ, ಬೀಟ್‍ರೂಟ್ ಗೆ 10 ರೂಪಾಯಿ. ಬೀನ್ಸ್, ಕ್ಯಾರೆಟ್, ತೊಂಡೆಕಾಯಿ, ಆಲೂಗಡ್ಡೆ, ತೆಂಗಿನಕಾಯಿ ಇಪ್ಪತ್ತು ರೂಪಾಯಿ.ಪುದೀನಾ, ಕೊತ್ತಂಬರಿ ಸೊಪ್ಪು, ಬಸಳೆ ಸೊಪ್ಪು ಕೂಡ ಹತ್ತು ರೂಪಾಯಿಯಲ್ಲಿ ಸಿಗಲಿದಯಂತೆ. ಇದಲ್ಲದೇ ಭಾನುವಾರ ಹಾಗೂ ಸೋಮವಾರ ಹಬ್ಬದ ಪ್ರಯುಕ್ತ ಈ ಬಂಪರ್ ಆಫರ್ ನೀಡಲಾಗಿದ್ದು ನೀವು ಕೂಡ ನಿಮ್ಮ ಹತ್ತಿರದ ಹಾಪ್ ಕಾಮ್ಸ್ ಮಳಿಗೆ ಭೇಟಿ ನೀಡಿ ಈ ಬಾರಿಯ ಶಿವರಾತ್ರಿ ಹಬ್ಬವನ್ನು ಕಡಿಮೆ ಖರ್ಚಿನಲ್ಲಿ ಆಚರಣೆ ಮಾಡಿ.
Comments