ಬೆಕ್ಕಿಗೆ ಟಿಕೆಟ್ ಕೊಟ್ಟ ಸಾರಿಗೆ ನಿರ್ವಾಹಕಿ..!!



ಮನುಷ್ಯರಿಗೆ, ವಸ್ತುಗಳಿಗೆ ಟಿಕೆಟ್ ತಗೋಳೋದನ್ನುನೋಡಿದ್ದೀವಿ ಆದ್ರೆ ಇಲ್ಲೊಬ್ಬ ಸಾರಿಗೆ ನಿರ್ವಾಹಕಿ ಬೆಕ್ಕಿಗೆ ಟಿಕೆಟ್ ಕೊಟ್ಟಿದ್ದಾರೆ. ಏನಿದು ಅಂತ ಆಶ್ಚರ್ಯ ಪಡ್ತಿದ್ದೀರಾ ಆದ್ರೆ ಇದು ನಿಜ.
ಹೌದು ನಗರದ ಮೌಲಾಲಿ ಎಂಬವರು ರೈಲು ನಿಲ್ದಾಣದಿಂದ ಚೀಲದಲ್ಲಿ ಬೆಕ್ಕು ತೆಗೆದುಕೊಂಡು ನಗರ ಸಾರಿಗೆ ಬಸ್ ಹತ್ತಿದ್ದಾರೆ. ಟಿಕೆಟ್ ಪಡೆಯೋವಾಗ ಬೆಕ್ಕು ಚೀರಿದೆ. ಈ ವೇಳೆ ಬಸ್ಸಿನ ನಿರ್ವಾಹಕಿ ಬೆಕ್ಕಿಗೆ ಟಿಕೆಟ್ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ.ನಿರ್ವಾಹಕಿಯ ಮಾತು ಕೇಳಿದ ಇತರ ಪ್ರಯಾಣಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿರ್ವಾಹಕಿ ಬೆಕ್ಕಿಗೂ ಸಹಿತ ಪೂರ್ಣ ಟಿಕೆಟ್ ಕೊಟ್ಟಿದ್ದಾರೆ. ನಗರದ ಗಾಂಧಿ ಚೌಕದವರೆಗೆ ಬೆಕ್ಕಿಗೂ 6 ರೂ. ಟಿಕೆಟ್ ನೀಡಿದ್ದಾರೆ. ಬಸ್ ನಲ್ಲಿ ಕೆಲಕಾಲ ಬೆಕ್ಕಿಗೂ ಬಸ್ ಚಾರ್ಜ್ ಅಂತ ಪ್ರಯಾಣಿಕರು ಮಾತನಾಡಿಕೊಂಡಿದ್ದಾರೆ. ಕೆಲವರು ಬೆಕ್ಕಿಗೆ ಯಾಕೆ ಬಸ್ ಚಾರ್ಜ್ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಮನುಷ್ಯರಿಗೆ, ಇತರೆ ವಸ್ತುಗಳಿಗೆ ಟಿಕೆಟ್ ತೆಗೆದುಕೊಳ್ಳುವುದು ಸಾಮಾನ್ಯ. ಆದ್ರೆ ಸಾಕುಪ್ರಾಣಿ ಬೆಕ್ಕಿಗೂ ಬಸ್ ಚಾರ್ಜ್ ಕೊಡಬೇಕಲ್ಲಾ ಎಂದು ಪ್ರಯಾಣಿಕರು ಚರ್ಚಿಸಿದ್ದಾರೆ
Comments