ನಂದಿನಿ ಹಾಲು ಉಪಯೋಗ ಮಾಡ್ತಿದ್ದೀರಾ ? ಹಾಗಿದ್ರೆ ಈ ಸುದ್ದಿ ಓದಿ..!

ಹೌದು, ರಾಜ್ಯದಲ್ಲಿ ಅತಿ ಹೆಚ್ಚು ಜನರು ಬಳಕೆ ಮಾಡುವ ನಂದಿನಿ ಹಾಲು ತನ್ನ ಗುಣಮಟ್ಟ ಹಾಗೂ ಕಡಿಮೆ ಬೆಲೆಯಿಂದಾಗಿ ಹೆಚ್ಚು ಮಾರಾಟವಾಗುವ ವಸ್ತುವಾಗಿದೆ. ಆದರೆ ಅಂತಹ ನಂದಿನಿ ಹಾಲಿನಲ್ಲಿ ಜಿರಳೆ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದ್ದು ನಂದಿನ ಉತ್ಪನಗಳ ಗುಣಮಟ್ಟವನ್ನು ಪ್ರಶ್ನೆ ಮಾಡುವ ಹಾಗೇ ಆಗಿದೆ.
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕೇವಲ ಹಾಲಿನ ಪ್ಯಾಕೆಟ್ ವೊಳಗೆ ಸತ್ತು ಬಿದ್ದಿರುವ ಜಿರಳೆ ಹಾಗೂ ಅದನ್ನು ತೋರಿಸುತ್ತಿರುವ ಮಹಿಳೆ ಹೊರತು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ನಂದಿನ ಹಾಲಿನ ಸುರಕ್ಷತೆಯ ಬಗ್ಗೆ ಅನುಮಾನಗಳು ಮೂಡುವುದು ಸಹಜವಾಗಿದೆ. ನಂದಿನಿ ಉತ್ಪನಕ್ಕೆ ಇರುವ ಒಳ್ಳೆ ಹೆಸರನ್ನು ಹಾಗೇ ಮುಂದುವರಿಸಿಕೊಂಡು ಹೋಗಬೇಕು ಅದರ ಬದಲು ಹೀಗೆ ಹಾಳು ಮಾಡಿಕೊಳ್ಳಬಾರದು ಅಂತ ನಂದಿನಿ ಉತ್ಪನಗಳ ಗ್ರಾಹಕರು ಒತ್ತಾಯಿಸಿದ್ದಾರೆ.
Comments