ವ್ಯಾಲಂಟೈನ್ಸ್ ಡೇ ಪ್ರೀಮಿಗಳಿಗೆ ಮಾತ್ರವಲ್ಲ, ಬೆಳೆಗಾರರಿಗೂ ಹಬ್ಬತರಿಸಿದೆ..!



ಒಲಿದ ಹೃದಯಗಳ ಬೆಸುಗೆಗೆ, ಮನದಾಳದ ಮೂಲೆಯಲ್ಲಿ ಸುಪ್ತವಾಗಿರುವ ಭಾವ ಹೊರ ಹೊಮ್ಮಿಸುವ ಸುಂದರ ಘಳಿಗೆಗೆ ಸಾಕ್ಷಿಯಾಗಲು ಪ್ರೇಯಸಿಗಿಂತ ಸೊಗಸಾದ ಗುಲಾಬಿ ಕೂಡ ಈಗ ಸಿಂಗಾರಗೊಳ್ಳುತ್ತಿದೆ. ಅಂದ ಹಾಗೆ ಈ ಬಾರಿ ಗುಲಾಬಿ ಹೂವು ಪ್ರೇಮಿಗಳಿಗೆ ಮಾತ್ರವಲ್ಲ ಬೆಳೆಗಾರರಿಗೂ ಹಬ್ಬ ತಂದಿದೆ. ಗುಲಾಬಿ ಹೂ ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಗುಲಾಬಿ ಹೂ ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 150 ಗುಲಾಬಿ ಬೆಳೆಗಾರರು 45 ಕಿ.ಮೀ ವ್ಯಾಪ್ತಿಯಲ್ಲಿ ಗುಲಾಬಿ ಬೆಳೆದಿದ್ದಾರೆ. ಅದರಲ್ಲಿ ತಾಜ್ ಮಹಲ್, ಗ್ರ್ಯಾಂಡ್ ಗಲಾ ಹಾಗೂ ಫರ್ಸ್ಟ್ ರೆಡ್ ಗೆ ಹೆಚ್ಚು ಬೇಡಿಕೆ ಇದೆ. ಪ್ರೇಮಿಗಳ ದಿನಕ್ಕಾಗಿ ಬೆಂಗಳೂರು ಒಂದರಿಂದಲೇ ಹೊರ ರಾಷ್ಟ್ರಗಳಿಗೆ ೮ ಕೋಟಿ ರೂ. ಮೌಲ್ಯದ ಕೆಂಪು ಗುಲಾಬಿ ರಫ್ತು ಆಗಲಿದೆ. ಯೂರೋಪ್ ದೇಶಗಳಲ್ಲಿ ಚಳಿ ಅಧಿಕವಾಗಿರುವುದರಿಂದ ಆ ಭಾಗಗಳಲ್ಲಿ ಗುಲಾಬಿ ಹೂವಿನ ಉತ್ಪಾದನೆ ಕುಸಿದಿದ್ದು, ಭಾರತೀಯ ಕೆಂಪು ಗುಲಾಬಿ ಹೂವಿಗೆ ಈ ವರ್ಷ ಬೇಡಿಕೆ ಹೆಚ್ಚಾಗಿದೆ. ಈ ಮೂಲಕ ಕೋಟ್ಯಂತರ ರೂ.ವಿದೇಶಿ ವಿನಿಮಯ ನಮ್ಮ ರಾಷ್ಟ್ರಕ್ಕೆ ಹರಿದು ಬರಲಿದೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 150 ಗುಲಾಬಿ ಬೆಳೆಗಾರರು 45 ಕಿ.ಮೀ ವ್ಯಾಪ್ತಿಯಲ್ಲಿ ಗುಲಾಬಿ ಬೆಳೆದಿದ್ದಾರೆ. ಅದರಲ್ಲಿ ತಾಜ್ ಮಹಲ್, ಗ್ರ್ಯಾಂಡ್ ಗಲಾ ಹಾಗೂ ಫರ್ಸ್ಟ್ ರೆಡ್ ಗೆ ಹೆಚ್ಚು ಬೇಡಿಕೆ ಇದೆ.
Comments