ಟ್ವಿಟರ್ ನಲ್ಲಿ ಸಚಿನ್ ಪುತ್ರಿ ಹೆಸರನ ಫೇಕ್ ಅಕೌಂಟ್ ತೆರೆದಿದ್ದ ಟೆಕ್ಕಿ ಬಂಧನ

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ತೆರಿದ್ದ ಮುಂಬೈ ಮೂಲದ ಟೆಕ್ಕಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನಿತಿನ್ ಶಿಶೋಡ್ ಎಂಬಾತನನ್ನು ಅಂಧೇರಿಯಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ.
ಈ ಹಿಂದೆ ಸಚಿನ್ ಪುತ್ರಿ ಸಾರಾ ಹೆಸರಲ್ಲಿ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಗಳನ್ನು ಉದ್ದೇಶಿಸಿ ಟ್ವೀಟ್ ಮಾಡುವ ಮೂಲಕ ಸಚಿನ್ ಕುಟುಂಬ ತೀವ್ರ ಮುಜುಗರಕ್ಕೊಳಗಾಗುವಂತೆ ಮಾಡಿದ್ದ. ಪ್ರಮುಖವಾಗಿ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಹಾಗೂ ಎನ್ ಸಿಪಿ ಮುಖಂಡ ಶರದ್ ಪವಾರ್ ಮತ್ತು ಅವರ ಪಕ್ಷದ ಕುರಿತು ಅವಹೇಳನಕಾರಿ ಟ್ವೀಟ್ ಹರಿಬಿಟ್ಟಿದ್ದ.ಈ ಟ್ವೀಟ್ ವ್ಯಾಪಕ ವೈರಲ್ ಆದ ಬೆನ್ನಲ್ಲೇ ಸ್ವತಃ ಸಚಿನ್ ತೆಂಡೂಲ್ಕರ್ ಅವರು, ಮುಂಬೈ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅಲ್ಲದೆ ತಮ್ಮ ಪುತ್ರ ಅರ್ಜುನ್ ಮತ್ತು ಸಾರಾ ಹೆಸರಲ್ಲಿರುವ ನಕಲಿ ಟ್ವಿಟರ್ ಖಾತೆಯನ್ನು ಫಾಲೋ ಮಾಡದಂತೆ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು
Comments