ಕಾರು ಅಪಘಾತದಲ್ಲಿ ಗಾಯಗೊಂಡ ಪ್ರಧಾನಿ ಮೋದಿಯವರ ಪತ್ನಿ

ರಾಜಸ್ಥಾನದ ಬರಾನ್ ನಿಂದ ಗುಜರಾತಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅವರ ಕಾರು ಅಪಘಾತಕ್ಕೀಡಾದ ಘಟನೆ ಇಂದು(ಫೆ.7) ನಡೆದಿದೆ. ಅಪಘಾತದಿಂದ ಜಶೋದಾಬೆನ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಇಲ್ಲಿನ ಚಿತ್ತೋರಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಜಶೋದಾಬೆನ್ ಅವರೊಂದಿಗಿದ್ದ ಅವರ ಸಂಬಂಧಿ ವಸಂತಬೆನ್ ಅವರೂ ಗಾಯಗೊಂಡಿದ್ದಾರೆ. ಸದ್ಯಕ್ಕೆ ಜಶೋದಾಬೆನ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಬರಾನ್ ಜಿಲ್ಲೆಯ ಕೊಟಾ ಎಂಬಲ್ಲಿಗೆ ಸಂಬಂಧಿಗಳನ್ನು ಭೇಟಿ ಮಾಡಲು ತೆರಳಿದ್ದ ಜಶೋದಾಬೆನ್ ಗುಜರಾತಿಗೆ ಮರಳುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಜಶೋದಾಬೆನ್ ಅವರು ತಮ್ಮ ಸಹೋದರ ಅಶೋಕ್ ಮೋದಿ ಅವರೊಂದಿಗೆ ವಾಸಿಸುತ್ತಿದ್ದಾರೆ.
Comments