ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ 'ಅಗ್ನಿ-1' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

06 Feb 2018 5:15 PM | General
313 Report

ಸೇನೆಯ ಯುದ್ಧತಂತ್ರ ವಿಭಾಗವು (ಎಸ್‌ಎಫ್ಸಿ) ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಮಂಗಳವಾರ ಬೆಳಿಗ್ಗೆ ಈ ಪರೀಕ್ಷೆ ನಡೆಸಿ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವಿರುವ, ಕಡಿಮೆ ದಾಳಿ ವ್ಯಾಪ್ತಿಯ 'ಅಗ್ನಿ-1' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ಸನ್ನದ್ಧತೆ ಪರಿಶೀಲಿಸಲು ಎಸ್‌ಎಫ್ಸಿ ನಡೆಸುವ ನಿಯಮಿತ ತರಬೇತಿ ಚಟುವಟಿಕೆಯ ಭಾಗವಾಗಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ 'ಅಗ್ನಿ-1'ಯ ಪರೀಕ್ಷೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. ನಿಗದಿತ ಗುರಿಯನ್ನು ಕ್ಷಿಪಣಿ ಅತ್ಯಂತ ನಿಖರವಾಗಿ ತಲುಪಿದೆ ಎಂದು ಮೂಲಗಳು ಹೇಳಿವೆ.

 

Edited By

Shruthi G

Reported By

Madhu shree

Comments