ಪತಂಜಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ..!

ಸುದ್ದಿಗಾರರೊಂದಿಗೆ ಯೋಗ ಋಷಿ ಬಾಬಾ ರಾಮದೇವ್ ಅವರು 6 ತಿಂಗಳು ಅವಧಿಯಲ್ಲಿ ಕನಿಷ್ಠ 1 ಸಾವಿರ ರೂ. ಮೌಲ್ಯದ ಪತಂಜಲಿ ಯೋಗ ಸಮಿತಿ ಸಿದ್ಧಪಡಿಸುವ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ 'ಲಾಯಲ್ಟಿ ಕಾರ್ಡ್' ನೀಡಲಾಗುವುದು. ಈ ಕಾರ್ಡ್ ಹೊಂದಿರುವ ಗ್ರಾಹಕ ಅಪಘಾತದಲ್ಲಿ ಮೃತಪಟ್ಟಲ್ಲಿ 5 ಲಕ್ಷ ರೂ. ಹಾಗೂ ಅಂಗವಿಕಲತೆ ಹೊಂದಿದಲ್ಲಿ 2.5 ಲಕ್ಷವರೆಗೂ ರೂ. ವಿಮೆ ಪರಿಹಾರ ಸೌಲಭ್ಯ ಕಲ್ಪಿಸಲಾಗುವುದು ಅಂತ ತಿಳಿಸಿದರು.
ನಾವು ನೀಡುತ್ತಿರುವ ಈ ಕಾರ್ಡ್‍ಗಳನ್ನು ಫೆ.20 ರ ಒಳಗಾಗಿ ದೇಶದ ಎಲ್ಲಾ ಪತಂಜಲಿ ಮೆಗಾಸ್ಟೋರ್ ಗಳ ಮೂಲಕ ಗ್ರಾಹಕರಿಗೆ ವಿತರಣೆ ಮಾಡಲಾಗುವುದು ಎಂದು ಬಾಬಾ ರಾಮದೇವ ವಿವರಿಸಿದರು. ದೇಶದಲ್ಲಿ 500 ಮೆಗಾ ಸ್ಟೋರ್ ಗಳನ್ನೂ ಸ್ಥಾಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ 250 ಸ್ಟೋರ್ ಗಳನ್ನು ಆರಂಭಿಸಲಾಗಿದೆ. ದೆಹಲಿ, ಮುಂಬೈಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
ಹೈದಾರಾಬಾದ್, ಚೆನ್ನೈ, ಬೆಂಗಳೂರು ಮತ್ತಿತರ ನಗರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದು. ಕರ್ನಾಟಕದಲ್ಲಿ 11 ಸ್ಟೋರ್ ಗಳನ್ನು ತೆರೆಯಲಾಗಿದೆ. ದೈನಂದಿನ ಜೀವನಕ್ಕೆ ಅಗತ್ಯವಿರುವ ಗೃಹ ಬಳಕೆಯ ವಸ್ತುಗಳು, ಅನೇಕ ಕಾಯಿಲೆಗಳಿಗೆ ಬೇಕಾಗುವ ಔಷಧಿಗಳು ಸೇರಿದಂತೆ ಒಟ್ಟು ಸುಮಾರು ಒಂದು ಸಾವಿರ ಉತ್ಪನ್ನಗಳನ್ನು ಪತಂಜಲಿ ಮೆಗಾ ಸ್ಟೋರ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಮತ್ತು ದೇಶಿ ಉತ್ಪನ್ನಗಳಿಗೆ ಪತಂಜಲಿ ಯೋಗ ಸಮಿತಿ ಆದ್ಯತೆ ನೀಡಿದೆ. ಯಾವುದೇ ಲಾಭ ಮತ್ತು ನಷ್ಟ ಇಲ್ಲದ ಸಂಸ್ಥೆ ನಮ್ಮದಾಗಿದೆ ಎಂದರು. ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಪ್ರಭಾರಿ ಭವರಲಾಲ್ ಆರ್ಯ ಇತರರು ಇದ್ದರು.
Comments