ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ವಿಭಿನ್ನವಾಗಿ ಜೈಕಾರ ಕೂಗಿದ ಅಭಿಮಾನಿ..!!

06 Feb 2018 9:38 AM | General
1662 Report

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅಭಿಮಾನಿಯೊಬ್ಬರು ವಿಭಿನ್ನವಾಗಿ ಜೈಕಾರ ಹಾಕಿದ್ದರಿಂದ ಒಂದು ಕ್ಷಣ ಸ್ಥಳದಲ್ಲಿದ್ದ ಎಲ್ಲರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತು.

ವರದರಾಜಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರದಲ್ಲಿ ಭಾಗಿಯಾಗಬೇಕೆಂದು ಮಂಡ್ಯದ ಹೊಡಾಗಟ್ಟಿ ಗ್ರಾಮದ ಗ್ರಾಮಸ್ಥರು ದೇವೇಗೌಡರನ್ನು ಆಮಂತ್ರಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಚ್.ಡಿ. ದೇವೇಗೌಡರು ಹೆಲಿಕಾಪ್ಟರ್ ಮೂಲಕ ಬಸರಾಳು ಸರ್ಕಾರಿ ಶಾಲಾ ಆವರಣದಲ್ಲಿ ಬಂದಿಳಿದರು.ಹೆಲಿಪ್ಯಾಡ್‍ನಿಂದ ದೇವಸ್ಥಾನಕ್ಕೆ ತೆರಳುವಾಗ ಸ್ಥಳದಲ್ಲಿದ್ದ ನೆರದಿದ್ದ ಎಲ್ಲರು ಗೌಡರನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಇನ್ನೇನು ಗೌಡರು ಕಾರು ಹತ್ತುತ್ತಿರುವಾಗ ರೈತರೊಬ್ಬರು “ರಾಗಿ ಮುದ್ದೆ ಪ್ರಿಯೆ ದೇವೇಗೌಡರಿಗೆ ಜೈ” ಎಂದು ಜೈಕಾರ ಹಾಕಿದ್ದಾರೆ.ಬಸರಾಳು ಗ್ರಾಮದಿಂದ ಹೊಡಾಗಟ್ಟಿ ಗ್ರಾಮಕ್ಕೆ ಆಗಮಿಸಿದ ಗೌಡರು ವರದರಾಜಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾದರು. ಪೂಜಾ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಗೌಡರು, ನಾನು ಕಾರಿನಲ್ಲಿ ಬರುವಾಗ ರೈತರೊಬ್ಬರು ನನ್ನನ್ನು ಮುದ್ದೇ ಗೌಡ ಅಂತಾ ಕರೆದರು. ಮುದ್ದೇ ಗೌಡ ಅಂತಾ ಕರೆದಿರುವುದು ನನಗೆ ಖುಷಿ ಆಯಿತು ಎಂದು ಹೇಳಿದರು.

Edited By

Shruthi G

Reported By

Shruthi G

Comments