ರಿಲಾಯನ್ಸ್ ಜಿಯೋ ಆಫರ್: ಕೇವಲ 49 ರೂ.ಗೆ ಮಾಡಿ ಅನಿಯಮಿತ ಕರೆ

ರಿಲಾಯನ್ಸ್ ಜಿಯೋ ತನ್ನ ಪ್ರಿಪೇಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್ ಬೆಲೆ 49 ರೂಪಾಯಿ ಹಾಗೂ 153 ರೂಪಾಯಿ. 49 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 1ಜಿಬಿ ಡೇಟಾ ಸಿಗಲಿದೆ. ಈ ಡೇಟಾ 4ಜಿ ಸ್ಪೀಡ್ ನಲ್ಲಿ ಸಿಗಲಿದ್ದು, ಇದು 28 ದಿನಗಳ ಸಿಂಧುತ್ವ ಹೊಂದಿರಲಿದೆ.
ಜಿಯೋದ 153 ರೂಪಾಯಿ ಪ್ಲಾನ್ ನಲ್ಲಿ 4ಜಿ ಸ್ಪೀಡ್ ನಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ ಸಿಂಧುತ್ವ ಕೂಡ 28 ದಿನಗಳವರೆಗೆ ಇರಲಿದೆ. 49 ರೂಪಾಯಿ ಪ್ಲಾನ್ ನಲ್ಲಿ ಉಚಿತ ಹಾಗೂ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು ಲಭ್ಯವಾಗಲಿವೆ. ಇದ್ರ ಜೊತೆಗೆ ಜಿಯೋ ಚಂದಾದಾರರಿಗೆ ಜಿಯೋ ಟಿವಿ, ಮ್ಯೂಸಿಕ್ ಮತ್ತು ಜಿಯೋ ಮನಿ ಸೇವೆ ಸಿಗಲಿದೆ. ಜೊತೆಗೆ ಪ್ರತಿ ತಿಂಗಳು 50 ಉಚಿತ ಎಸ್ ಎಂ ಎಸ್ ಸಿಗಲಿದೆ. 153 ಪ್ಲಾನ್ ನಲ್ಲಿ ಕೂಡ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು ಸಿಗಲಿವೆ. ಜಿಯೋ ಟಿವಿ, ಮ್ಯೂಸಿಕ್, ಜಿಯೋ ಮನಿ ಜೊತೆ 100 ಎಸ್ ಎಂ ಎಸ್ ಉಚಿತವಾಗಿ ಸಿಗಲಿದೆ. ಒಟ್ಟೂ 28 ದಿನಕ್ಕೆ 42 ಜಿಬಿ ಡೇಟಾ 153 ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ.
Comments