ಜೆಡಿಎಸ್ ಬಂಡಾಯ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರಿಂದ ಚಪ್ಪಲಿ,ತಂಬಿಗೆ ಎಸೆತ

ಕೊಪ್ಪಳ: ಸ್ವಕ್ಷೇತ್ರದಲ್ಲಿ ವಾರ್ಡ್ ಭೇಟಿಗೆ ತೆರಳಿದ್ದ ಜೆಡಿಎಸ್ ಬಂಡಾಯ ಶಾಸಕ ಇಕ್ಬಾಲ್ ಅನ್ಸಾರಿ ಅವರತ್ತ ಮಹಿಳೆಯರು ಚಪ್ಪಲಿ, ಕೊಡಪಾನಗಳನ್ನು ತೂರಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಗಂಗಾವತಿ ನಗರದ 28 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ವಾರ್ಡ್ ವಿಸಿಟ್ ಗೆ ಬಂದ ವೇಳೆ ಶಾಸಕ ಅನ್ಸಾರಿ ಗೆ ಮಹಿಳೆಯರು ಘೇರಾವ್ ಹಾಕಿದರು. ಸರಿಯಾದ ಶೌಚಾಲಯ ಇರದ ಹಿನ್ನಲೆಯಲ್ಲಿ ತಂಬಿಗೆ ಹಿಡಿದುಕೊಂದು ಅನ್ಸಾರಿ ಭಾಷಣಕ್ಕೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಇದರಿಂದಾಗಿ ಕೆಲ ಕಾಲ 28ನೇ ವಾರ್ಡಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ವಾರ್ಡ್ ಜನರ ಮಧ್ಯೆ ವಾಗ್ವಾದ ನಡೆಯಿತು. ಕಾರ್ಯಕ್ರಮದಿಂದ ಇಕ್ಬಾಲ್ ಅನ್ಸಾರಿ ಅರ್ಧಕ್ಕೆ ಹೊರಟುಹೋದರು.ಮಹಿಳೆಯರು ಅನ್ಸಾರಿಗೆ ತಂಬಿಗೆ ಮತ್ತು ಚಪ್ಪಲಿ ಎಸೆದ ನಂತರ ಪೊಲೀಸ್ ರಿಂದ ಲಘು ಲಾಠಿ ಪ್ರಹಾರ ನಡೆಯಿತು.
Comments