ಇಂದು ಕಾವೇರಿ ವಿವಾದಕ್ಕೆ ತೆರೆ ಎಳೆಯಲಿರುವ ಸುಪ್ರೀಂ

ಕಾವೇರಿ ನೀರಿಗಾಗಿ ಹಲವು ವರ್ಷಗಳಿಂದ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿರುವ ಜಿಲ್ಲೆಯ ರೈತರು ಸಂಘಟನೆಗಳ ಮುಖಂಡರು ಈಗ ಸುಪ್ರೀಂ ಕೋರ್ಟ್ ತೀರ್ಪಿನತ್ತ ಚಿತ್ತ ಹರಿಸಿದ್ದು, ತೀರ್ಪು ಯಾರ ರೀತಿ ಬರಲಿದೆ ಎಂಬ ಆತಂಕದಲ್ಲಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನಿಂದ ಇಂದು(ಫೆ.5 ) ಅಂತಿಮ ತೀರ್ಪು ಹೊರಬೀಳಲಿದೆ ಎನ್ನಲಾಗಿದ್ದು, ಜಿಲ್ಲೆಯಲ್ಲಿ ತಳಮಳ ಆರಂಭವಾಗಿದೆ. ರಾಜ್ಯಕ್ಕೆ ನ್ಯಾಯ ಸಿಗುವುದೇ ಎಂ ಆತಂಕ ಕಾಡಲಾರಂಭಿಸಿದೆ. ಸುಪ್ರೀಂಕೋರ್ಟ್ ನಲ್ಲಿ ಸುದೀರ್ಘ ವಿಚಾರಣೆ ನಡೆದು 15 ದಿನಗಳ ಹಿಂದೆ ನಾಲ್ಕು ವಾರದಲ್ಲಿ ಅಂತಿಮ ತೀರ್ಪು ನೀಡುವುದಾಗಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.೫ರಂದು ತೀರ್ಪು ಹೊರಬೀಳಲಿದೆ ಎಂಬ ಮಾತುಗಳು ಕೇಳಿಬಂದಿದೆ.
Comments