ಗ್ರಾಹಕರ ಕಣ್ಣಲ್ಲಿ ಮತ್ತೊಮೆ ನೀರು ತರಿಸಿದ ಈರುಳ್ಳಿ ಬೆಲೆ..!!

ದಿನ ನಿತ್ಯದ ಅಡುಗೆಗಾಗಿ ಬಳಕೆ ಮಾಡಲಾಗುತ್ತಿದ್ದ ಈರುಳ್ಳಿ ಬೆಲೆ ಹೆಚ್ಚಾಗಲಿದ್ದು ಈ ಮೂಲಕ ಮತ್ತೆ ಈರುಳ್ಳಿಯನ್ನು ಕೊಳ್ಳುವವರ ಕಿಸೆಯಿಂದ ಹೆಚ್ಚಿನ ಹಣ ತೆಗೆದಿಡಬೇಕಾದ ಸನ್ನಿವೇಶ ನಿರ್ಮಣವಾಗಲಿದೆ. ಹೌದು. ಈರುಳ್ಳಿ ಉತ್ಪಾದನೆ ಕುಂಠಿತವಾಗಿರುವುದು ಬೆಲೆ ಏರಿಕೆಗೆ ಕಾರಣ ಅಂತ ಹೇಳಲಾಗುತ್ತಿದೆ.
ಇದಲ್ಲದೇ ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಗಳು ಎನಿಸಿದ ಲಸಾಸ್ಗಾಂವ್, ಪಿಂಪಲ್ಗಾಂವ್ ಮತ್ತು ನಾಸಿಕ್, ಬೆಂಗಳೂರಿನಲ್ಲಿ ಇರುವಂತಹ ಈರುಳ್ಳಿ ಮಾರುಕಟ್ಟೆಯಲ್ಲಿ ದುಬಾರಿ ದರದಿಂದಾಗಿ ವಹಿವಾಟು ಕೂಡಾ ಕುಸಿದಿದ್ದು, ಉತ್ಪದನೆ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದ ಕೂಡ ಮಾರುಕಟ್ಟೆ ಪ್ರವೇಶಿಸುವ ಈರುಳ್ಳಿ ತುಂಬಿದ ವಾಹನಗಳ ಸಂಖ್ಯೆ ಶೇಕಡ 30ರಷ್ಟು ಕುಸಿದಿದೆಯಂತೆ.ಈ ನಡುವೆ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ 40-50 ರೂಪಾಯಿ ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ, ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಹೊಸ ಬೆಳೆ ಮಾರುಕಟ್ಟೆಗೆ ಬಂದ ಬಳಿಕ ದರ ಸ್ಥಿರವಾಗಲಿದೆ ಎಂಬ ವಿಶ್ವಾಸವಿದ್ದು ಇನ್ನೂ ಕೆಲವುದ ದಿವಸಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿ ತದನಂತರ ಕಡಿಮೆಯಾಗಲಿದೆ ಅಂತ ಹೇಳಲಾಗುತ್ತಿದ್ದು ಕಾದು ನೋಡಬೇಕಾಗಿದೆ.ಮದುವೆ ಸೇರಿದಂತೆ ಇನ್ನೀತ್ತರ ಸಮಾರಂಭಗಳಿಗೆ ತರಕಾರಿ/ಈರುಳ್ಳಿ ತರ ಬೇಕಾದವರು ಕೂಡ ಹೆಚ್ಚಿರುವ ಈರುಳ್ಳಿ ಬೆಲೆ ಕೇಳಿ ಒಂದು ಕ್ಷಣ ಕಂಗಾಲುತ್ತಿದ್ದಾರೆ. ಇವೆಲ್ಲದರ ನಡುವೆ ಚಳಿಗಾಲಕ್ಕೆ ಈರುಳ್ಳಿ ಬೊಂಡಾ, ಈರುಳ್ಳಿ ದೋಸೆ ಸೇರಿದಂತೆ ಇನ್ನಿತ್ತರ ಈರುಳ್ಳಿ ಪದಾರ್ಥಗಳಿಂದ ಮಾಡಿದ ತಿನಿಸುಗಳನ್ನು ತಿನ್ನುವವರಿಗೂ ಕೂಡ ಬೆಲೆ ಏರಿಕೆ ಬಿಸಿ ಕಾಣಿಸಿದ್ದು, ಈರುಳ್ಳಿ ಬೆಲೆ ಹೆಚ್ಚಾಗಿರುವ ಕಾರಣ ಕೆಲ ಹೋಟೆಲ್ ಗಳಲ್ಲಿ ಈರುಳ್ಳಿಯಿಂದ ಮಾಡಿರುವ ತಿನಿಸುಗಳ ಬೆಲೆಗಳನ್ನು ಹೆಚ್ಚಳ ಮಾಡಲು ಮುಂದಾಗಿದ್ದಾರೆ ಕೂಡ.
Comments