ನಟಿ ಭಾನುಪ್ರಿಯಾ ಮಾಜಿ ಪತಿ ವಿಧಿವಶ

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಟಿಸಿರುವ ಕೂಚಿಪುಡಿ ಕಲಾವಿದೆ ಖ್ಯಾತಿಯ ನಟಿ ಭಾನುಪ್ರಿಯಾ ಅವರ ಮಾಜಿ ಪತಿ ಆದರ್ಶ್ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಭಾನುಪ್ರಿಯಾ ತಮ್ಮ ವೈಯಕ್ತಿಕ ವಿಷಯಗಳನ್ನು ಮಾಧ್ಯಮಗಳಿಗೆ ತಿಳಿಸದೆ ಇದ್ದ ಕಾರಣ ಸುದ್ದಿ ತಡವಾಗಿದೆ.
ಇನ್ನು ಇದೇ ವೇಳೇ ತಮ್ಮ ಮಾಜಿ ಪತಿ ಆದರ್ಶ್ ನಿಧನಸುದ್ದಿ ತಿಳಿಯುತ್ತಿದ್ದಂತೆ ಭಾನುಪ್ರಿಯಾ ತೆರಳಿದ್ದಾರೆ ಎನ್ನಲಾಗಿದೆ. ಇದನ್ನು ತಮಗೆ ಸಿನಿಮಾ ರಂಗದಲ್ಲಿ ಹೀರೋಯಿನ್ ಆಗಿ ಅವರಿಗೆ ಅವಕಾಶಗಳು ಕಡಿಮೆಯಾದಾಗ ಆದರ್ಶ್‍ರನ್ನು 1988ರಲ್ಲಿ ಮದುವೆಯಾಗಿದ್ದರು. ತಮ್ಮ ಮದುವೆಯಾದ ಬಳಿಕ ಅಮೆರಿಕಗೆ ಹೊರಟುಹೋಗಿದ್ದರು. ಈ ನಡುವೆ ಆದರೆ ಭಿನ್ನಾಭಿಪ್ರಾಯಗಳ ಕಾರಣ ಇವರು 2005ರಲ್ಲಿ ಬೇರ್ಪಟ್ಟಿದ್ದರು. ಇವರ ದಾಂಪತ್ಯದ ಫಲವಾಗಿ ಒಬ್ಬ ಮಗಳು ಸಹ ಇದ್ದಾರೆ. ಕನ್ನಡದ ರಸಿಕ, ದೇವರ ಮಗ, ಸಿಂಹಾದ್ರಿಯ ಸಿಂಹ, ಕದಂಬ, ಮೇಷ್ಟ್ರು, ಛತ್ರಪತಿ ಸಿನಿಮಾಗಳಲ್ಲಿ ಭಾನುಪ್ರಿಯಾ ಅಭಿನಯಿಸಿದ್ದಾರೆ. ಮತ್ತೆ 2005ರ ಸುಮಾರಿಗೆ ಭಾರತಕ್ಕೆ ವಾಪಸ್ಸಾದ ಭಾನುಪ್ರಿಯಾ ಮತ್ತೆ ಸಿನಿಮಾಗಳಲ್ಲಿ ಬಿಝಿಯಾಗಿದ್ದರು. ಪೋಷಕ ಕಲಾವಿದೆಯಾಗಿ, ತಾಯಿ ಪಾತ್ರಗಳಲ್ಲಿ ಅಭಿಮಯಿಸಿದ್ದಾರೆ. ಇನ್ನು ಸದ್ಯ ಭಾನುಪ್ರಿಯ ಅವರು ಚೆನ್ನೈನಲ್ಲಿ ಸೆಟ್ಲ್ ಆಗಿದ್ದರು.
Comments