ಗುವಾಹಟಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸಾವನ್ನಪ್ಪಿದ ಯೋಧ
ಇಲ್ಲಿನ ಶಿಗ್ಗಾಂವ ತಾಲ್ಲೂಕಿನ ಮುಗಳಿ ಗ್ರಾಮದ ಯೋಧ ಗುವಾಹಟಿಯಲ್ಲಿ ಕರ್ತವ್ಯ ನಿರ್ವಹಿಸುವ ಸಮಯ ಸಾವನ್ನಪಿದ್ದಾರೆ. ಗುವಾಹಟಿಯ ಟೆಂಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಬಸಪ್ಪ ಚಂದ್ರು ಟವಗಿ (35) ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ. ಗುವಾಹಟಿಯಿಂದ ತನ್ನ ಕರ್ತವ್ಯ ಸ್ಥಾನ ಅರುಣಾಚಲ ಪ್ರದೇಶಕ್ಕೆ ತೆರಳುವ ಮಾರ್ಗ ಮಧ್ಯ ಅತಿಯಾದ ಚಳಿಯಿಂದಾಗಿ ಸರಿಯಾಗಿ ಆಮ್ಲಜನಕ ಪೂರೈಕೆ ಆಗದೆ ಸಾವನ್ನಪ್ಪಿದ್ದಾರೆ.
2002 ರಲ್ಲಿ ಸೇನೆಗೆ ಸೇರಿದ್ದ ಅವರು ಡಿಸೆಂಬರ್ ತಿಂಗಳಿನಲ್ಲಿ ರಜೆಗೆಂದು ಸ್ವಗ್ರಾಮಕ್ಕೆ ಬಂದು ಕರ್ತವ್ಯಕ್ಕೆ ವಾಪಾಸ್ಸಾಗಿದ್ದರು. 2019 ರ ವೇಳೆಗೆ ಸೇವೆ ಪೂರ್ಣ ಗೊಳಿಸಿ ಸ್ವಗ್ರಾಮಕ್ಕೆ ವಾಪಾಸ್ಸಾಗುವುದಾಗಿ ಕುಟುಂಬದೊಂದಿಗೆ ಹೇಳಿದ್ದರು ಆದರೆ ವಿಧಿ ಅವರನ್ನು ಪರಲೋಕಕ್ಕೆ ಕರೆದುಕೊಂಡಿದೆ. ಯೋಧ ಚಂದ್ರು ಅವರ ಮನೆಯಲ್ಲಿ ಹೆಂಡತಿ, ಮಕ್ಕಳು, ತಂದೆ-ತಾಯಿಯರ ಆಕ್ರಂದನ ಮುಗಿಲು ಮುಟ್ಟಿದೆ. ಯೋಧ ಚಂದ್ರು ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮ ಮುಗುಳಿಯಲ್ಲಿಯೇ ನೆರವೇರಲಿದೆ.
Comments