ನೀವು ಚಿಕನ್ ತಿಂತೀರಾ? ಹಾಗಿದ್ರೆ ಈ ಸುದ್ದಿ ಓದಿ..!

ನೀವು ಚಿಕನ್ ತಿಂತೀರಾ? ಚಿಕನ್ ಇಲ್ಲದ ಊಟ ನಿಮಗೆ ಅಪೂರ್ಣವಾಗಿದ್ಯ? ಹಾಗಾದ್ರೇ ನೀವು ಇಷ್ಟ ಪಟ್ಟು ತಿನ್ನುವ ಕೋಳಿಯಿಂದ ತಯಾರಿಸುವ ಬಿರಿಯಾನಿ, ಕಬಾಬ್, ಮಾಂಸ ಎಲ್ಲವು ತುಂಬಾ ಡೇಂಜರ್ ಆಗಿದ್ದು ಕೋಳಿ ಮಾಂಸ ತುಂಬಾ ಅಪಾಯಕಾರಿ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
`ದಿ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ' ಎಂದು ಸಂಸ್ಥೆಯೊಂದು ಭಾರತದಲ್ಲಿ ಕೋಳಿ ಉದ್ಯಮದ ಕುರಿತು ತನಿಖೆ ನಡೆಸಿ ವರದಿಯೊಂದನ್ನು ಸಿದ್ಧ ಪಡಿಸಿದೆ. ಅದರ ಪ್ರಕಾರ ಕೋಳಿಗಳು ತ್ವರಿತ ಗತಿಯಲ್ಲಿ ಬೆಳೆಯಲಿ, ಅಧಿಕ ಲಾಭ ತಂದುಕೊಡಲಿ ಎಂಬ ಉದ್ದೇಶದಿಂದ ಅವುಗಳಿ ಕಾಲಿಸ್ಟಿನ್ ಔಷಧಿ ಕೊಡಲಾಗುತ್ತದೆ. ಕೋಳಿಗಳಿಗೆ ನೀಡಲಾಗುವ ಕಾಲಿಸ್ಟಿನ್ ನನ್ನು ನ್ಯುಮೋನಿಯಾ ಮತ್ತು ಇತರೆ ಸೋಂಕು ರೋಗಗಳಿಗೆ ಚಿಕಿತ್ಸೆ ಕೊಡಲು ಬಳಸುವ ಔಷಧವಾಗಿದೆಯಂತೆ. ಕೋಳಿಗಳು ವೇಗವಾಗಿ ಬೆಳೆಯಲು ಈ ಔಷಧಿ ಕೊಡುವುದರಿಂದ ಅವುಗಳನ್ನು ತಿನ್ನುವ ನಮಗೂ ಕೂಡ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರುತ್ತದೆ ಅನ್ನೋ ಆಘಾತಕಾರಿ ಮಾಹಿತಿಯನ್ನು ಸಂಸ್ಥೆ ಹೊರ ಹಾಕಿದೆ. ಇನ್ನು ಈ ಔಷಧಿಯನ್ನು ಮನುಷ್ಯನಿಗೂ ಕೂಡ ನೀಡಲಾಗುತ್ತದೆ ಆದರೆ ಅದು ಆತನ ದೇಹ ಸ್ಥಿತಿ ತುಂಬಾ ಗಂಭೀರವಾದ ಅನಾರೋಗ್ಯಸ್ಥರಿಗೆ ಮಾತ್ರ ಉಪಯೋಗಿಸುತ್ತಾರೆ. ಅದನ್ನು ಬೇರೆ ಬೇರೆ ಸಮಯದಲ್ಲಿ ಬಳಸಿದರೆ ಅದು ವಿಷವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರ ಆರೋಗ್ಯ ತಜ್ಞರು.
Comments