ದೇಶದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಉಗ್ರಗಾಮಿಗಳನ್ನೂ ಸದೆಬಡಿದ ಭಾರತದ ಸೈನಿಕರು

02 Feb 2018 2:45 PM | General
388 Report

ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ವಾರ ಸೈನಿಕರಿಂದ ಇಬ್ಬರು ಮತ್ತು ಪ್ರತ್ಯೇಕ ಘಟನೆಗಳಲ್ಲಿ ಮೂವರು ಸೇರಿ ಐವರು ನಾಗರಿಕರು ಸಾವಿಗೀಡಾದುದನ್ನು ಪ್ರತಿಭಟಿಸಲು ಪ್ರತ್ಯೇಕತಾವಾದಿಗಳು ಕರೆ ನೀಡಿರುವುದರಿಂದ ಬೇಸಿಗೆ ರಾಜಧಾನಿ ಶ್ರೀನಗರದ ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಶೋಪಿಯಾನ್ ಪಟ್ಟಣದಲ್ಲಿ ಶುಕ್ರವಾರ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಜಮ್ಮು ಕಾಶ್ಮೀರದ ಸಾಂಬಾ ವಲಯದಲ್ಲಿ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ನಮ್ಮ ದೇಶದೊಳಕ್ಕೆ ನುಸುಳಲು ಉಗ್ರಗಾಮಿಗಳು ನಡೆಸುತ್ತಿದ್ದ ಯತ್ನವನ್ನು ಗಡಿ ಭದ್ರತಾ ಪಡೆ ವಿಫಲಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಡಿ ಬಳಿ ಅನುಮಾನಾಸ್ಪದ ಚಲನವಲನ ಕಂಡು ಬಂದುದರಿಂದ ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದರು. ನುಸುಳಲು ಯತ್ನಿಸುತ್ತಿದ್ದವರು ಹಿಮ್ಮೆಟ್ಟಿದರು ಎಂದು ಮೂಲಗಳು ತಿಳಿಸಿವೆ.



Edited By

Shruthi G

Reported By

Madhu shree

Comments