ಜೆಡಿಎಸ್ ರೆಬೆಲ್ ಶಾಸಕ ಇಕ್ಬಾಲ್ ಅನ್ಸಾರಿಯ ಸುಳ್ಳಿನ ಮುಖವಾಡ ಬಯಲು ಮಾಡಿದ ಅರ್ಚಕ..!!

ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳೋದೆಲ್ಲಾ ಬರೀ ಸುಳ್ಳು. ಅಲ್ಲದೇ ಸಂಸ್ಕೃತ ದ್ವೇಷಿ ಕೂಡ. ಇತ್ತೀಚೆಗಷ್ಟೇ ಶ್ರೀರಾಮನ ಬಗ್ಗೆ ಮಾತನಾಡಿದ್ದ ಇವರಿಗೆ ಸಂಸ್ಕೃತ ಪಾಠ ಶಾಲೆಯ ಅವಶ್ಯಕತೆಯಿಲ್ಲ ಅಂತ ಅರ್ಚಕ ವಿದ್ಯಾದಾಸ್ ಬಾಬಾ ಹೇಳಿದ್ದಾರೆ.
ಅಂಜನಾದ್ರಿ ಪರ್ವತದಲ್ಲಿ ಸಂಸ್ಕೃತ ಪಾಠ ಶಾಲೆ ನಡೆಯಲು ಶಾಸಕರು ಅಡ್ಡಿಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಪತ್ನಿ ಪೂಜೆ ಸಲ್ಲಿಸೋ ಅಂಜನಾದ್ರಿ ಪರ್ವತಕ್ಕೆ 2 ಕೋಟಿ ರೂ. ಅನುದಾನ ನೀಡಿದ್ದೇನೆ ಅಂತಾ ಬೊಗಳೆ ಬಿಟ್ಟು ತಗಲಾಕೊಂಡಿದ್ದಾರೆ ಅಂತ ಶಾಸಕರ ಸುಳ್ಳಿನ ಮುಖವಾಡವನ್ನ ಅರ್ಚಕ ವಿದ್ಯಾದಾಸ್ ಬಾಬಾ ದಾಖಲೆ ಸಮೇತ ಬಯಲು ಮಾಡಿದ್ದಾರೆ.ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ ದೇಶಪಾಂಡೆ ಪರ್ವತದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಎಂಎಲ್‍ಸಿ 10 ಲಕ್ಷ, ಸಂಸದ ಸಂಗಣ್ಣ ಕರಡಿ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಆದ್ರೆ ಶಾಸಕ ಇಕ್ಬಾಲ್ ಅನ್ಸಾರಿ ನಯಾಪೈಸೆ ಅನುದಾನ ನೀಡದೇ ಸುಳ್ಳು ಹೇಳುತ್ತಾ ಹಿಂದೂ ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನ್ಸಾರಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಕೊಲೆ ಸುಲಿಗೆ ನಡೆಯುತ್ತಿದೆ. ಶ್ರೀರಾಮನ ಹೆಸರಿನಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಈ ಮೂಲಕ ನಮ್ಮ ಯುವಕರನ್ನು ಜೈಲಿಗೆ ಹೋಗಬೇಕೆಂದು ಕುಮ್ಮಕ್ಕು ಕೊಡುತ್ತಿದ್ದಾರೆ. ಮೋದಿ ಪ್ರಧಾನಿಯಾದ ಮೇಲೆ ಇದು ಹೆಚ್ಚಾಗಿದೆ. ಅವರಿಗೆ ಸಂವಿಧಾನ, ಕಾನೂನು ಇಲ್ಲ. ನಮಗೆ ಇರುವ ದೇಶಾಭಿಮಾನ ಅವರಿಗಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
Comments