ಚಿನ್ನದ ಗಟ್ಟಿಗಳನ್ನು ಸಾಗಿಸಲು ಯತ್ನಿಸುತ್ತಿದ್ದ ಮಾಜಿ ಸೇನಾಧಿಕಾರಿ

ಒಂದು ಕೆಜಿ ಚಿನ್ನದ ಗಟ್ಟಿಗಳನ್ನು ಸಾಗಿಸಲು ಯತ್ನಿಸುತ್ತಿದ್ದ ಮಾಜಿ ಆರ್ಮಿ ಜನರಲ್ ಒಬ್ಬರನ್ನು ಜಮ್ಮು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರು ಮದ್ಯ ಕೂಡ ಸೇವಿಸಿದ್ರು ಎನ್ನಲಾಗಿದೆ. ಚಿನ್ನದ ಗಟ್ಟಿಗಳ ಬಗ್ಗೆ ಸೂಕ್ತ ದಾಖಲೆ ಕೂಡ ಅವರ ಬಳಿ ಇರಲಿಲ್ಲ.
ಲೆಫ್ಟಿನೆಂಟ್ ಜನರಲ್ ಅಮಿತ್ ಸರಿನ್ ವಿಮಾನದ ಮೂಲಕ ದೆಹಲಿಗೆ ಹೊರಟಿದ್ದರು. ಲಗೇಜ್ ಸ್ಕ್ಯಾನಿಂಗ್ ವೇಳೆ ಅವರ ಬ್ಯಾಗ್ ನಲ್ಲಿ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಶಾರ್ಜಾ ಮೂಲದ ಜ್ಯುವೆಲರಿ ಕಂಪನಿಯೊಂದರಲ್ಲಿ ಈ ಗಟ್ಟಿಗಳನ್ನು ತಯಾರಿಸಲಾಗಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿರೋ ಪೊಲೀಸರು, ಮಾಜಿ ಸೇನಾಧಿಕಾರಿಯನ್ನು ಬಿಟ್ಟು ಕಳಿಸಿದ್ದಾರೆ. 7 ದಿನಗಳೊಳಗೆ ದಾಖಲೆ ನೀಡುವಂತೆ ನೋಟಿಸ್ ಕೊಡಲಾಗಿದೆ.
Comments