ಮಗುವಿನ ಪ್ರಾಣಕ್ಕೆ ಖುತ್ತು ತಂದ ಮೊಬೈಲ್ ಚಾರ್ಜರ್
ಮೊಬೈಲ್ ಚಾರ್ಜರ್ ಹಿಡಿದುಕೊಂಡು ಆಟವಾಡುತ್ತಿದ್ದ 4 ವರ್ಷದ ಬಾಲಕನೋರ್ವ ಅದನ್ನು ಬಾಯಿಯಿಂದ ಕಚ್ಚಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಸಮೀಪದ ಆಲ್ದೂರಿನ ವಗರ್ ರಸ್ತೆಯಲ್ಲಿ ನಡೆದಿದೆ.
ಇಂದ್ರೇಶ್, ಲೀಲಾ ದಂಪತಿಯ ಪುತ್ರ ಅಭಿಜ್ಞಾನ್(4) ಮೃತಪಟ್ಟ ಮಗು. ಮನೆಯಲ್ಲಿ ತಾಯಿಯೊಂದಿಗೆ ಇದ್ದ ಅಭಿಜ್ಞಾನ್, ಮೊಬೈಲ್ ಚಾರ್ಜರ್ ಕೈಯಲ್ಲಿಡಿದುಕೊಂಡು ಆಟವಾಡುವಾಗ ಬಾಯಲ್ಲಿಟ್ಟುಕೊಂಡು ಕಚ್ಚಿದ್ದು, ವಿದ್ಯುತ್ ಪ್ರವಹಿಸಿದೆ. ಇದರಿಂದಾಗಿ ವಿದ್ಯುತ್ ಆಘಾತಕ್ಕೆ ಒಳಗಾದ ಮಗುವನ್ನು ಆಲ್ದೂರು ಆಸ್ಪತ್ರೆಗೆ, ಅಲ್ಲಿಂದ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಈ ವೇಳೆಗಾಗಲೇ ಮಗು ಮೃತಪಟ್ಟಿದೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
Comments