ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ

ಸ್ಯಾಂಡಲ್‍ವುಡ್ ನ ಹೆಬ್ಬುಲಿ ಸಿನಿಮಾದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಅಭಿನಿಯಿಸಿದ್ದ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎನ್ನಲಾಗಿದೆ. ನಟಿ ಅಮಲಾ ಪೌಲ್ ಅವರು ಮಲೇಷಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮಯೊಂದಕ್ಕೆ ಅವರು ಡ್ಯಾನ್ಸ್ ನನ್ನು ಅಭ್ಯಾಸ ಮಾಡುತ್ತಿದ್ದ ವೇಳೆಯಲ್ಲಿ ಒಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ.
ಈ ಘಟನೆಯು ನಗರದ ಪ್ರಸಿದ್ಧ ನೃತ್ಯ ನಿರ್ದೇಶಕ ಶ್ರೀಧರನ ನೃತ್ಯ ಸ್ಟುಡಿಯೊದಲ್ಲಿ ನಡೆದಿದೆ. ಘಟನೆ ಬಗ್ಗೆ ಅವರು ಚೆನ್ನೈನಲ್ಲಿರುವ ಟಿ.ನಗರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಅವರು ದೂರು ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ನಾನು ಮಲೇಷಿಯಾದ ಕಾರ್ಯಕ್ರಮಯೊಂದಕ್ಕೆ ಹೋಗಬೇಕಿತ್ತು. ಆ ಕಾರಣಕ್ಕಾಗಿ ನಾನು ಡ್ಯಾನ್ಸ್ ಅಭ್ಯಾಸಕ್ಕೆ ಹೋಗಿದ್ದೆ. ನಾನು ಅಭ್ಯಾಸ ಮಾಡುತ್ತಿದ್ದ ಸ್ಥಳಕ್ಕೆ ಬಂದ ವ್ಯಕ್ತಿ ನನಗೆ ಪರಿಚಿತನಿರುವಂತೆ ಮಾತನಾಡಿದ ಬಂ ಬಳಿಕ ನಾನು ಒಬ್ಬಂಟಿಯಾಗಿ ಇದ್ದಾಗ ಅಸಭ್ಯವಾಗಿ ನನ್ನೊಂದಿಗೆ ಮಾತನಾಡಿದರು. ನನಗೆ ತಕ್ಷಣ ಆಘಾತವಾಯಿತು. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಈ ಘಟನೆಯಿಂದ ನನಗೆ ಸುರಕ್ಷಿತ ಇಲ್ಲ ಎಂದು ಭಾವನೆ ಉಂಟಾಯಿತು. ನಾನೊಬ್ಬ ಸ್ವತಂತ್ರ ಮಹಿಳೆಯಾಗಿದ್ದೇನೆ. ನಟಿಯ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಆಸಕ್ತಿಯನ್ನು ವಹಿಸಿ ತನಿಖೆ ನಡೆಸುತ್ತಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಸ್ಥ ಅಝೇಗೆಸನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments