ಮೊಬೈಲ್ ನಂಬರ್ 'ಪೋರ್ಟ್' ಮಾಡ್ಬೇಕಂತಿದಿರಾ ಹಾಗಿದ್ರೆ ಈ ಸುದ್ದಿ ಓದಿ..!
ಯಾವುದೇ ನೆಟ್ವರ್ಕ್ ನಿಂದ ಪೋರ್ಟ್ ಮಾಡಲು ಮೊಬೈಲ್ ಬಳಕೆದಾರರಿಗೆ 4 ರೂಪಾಯಿಗಿಂತ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ. ಆದ್ರೆ ಅದಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಬಹುದು. ಸಬ್ ಸ್ಕ್ರೈಬರ್ ಗಳು ತಮ್ಮ ಮೊಬೈಲ್ ನೆಟ್ವರ್ಕ್ ಅನ್ನು ಬದಲಾಯಿಸಬಹುದು.
ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಶುಲ್ಕದಲ್ಲಿ ಟ್ರಾಯ್ ಭಾರೀ ಕಡಿತ ಮಾಡಿದೆ. ಈ ಮೊದಲು ಮೊಬೈಲ್ ಪೋರ್ಟೆಬಿಲಿಟಿ ಶುಲ್ಕ 19 ರೂಪಾಯಿ ಇತ್ತು. ಈಗ ಶೇ.79ರಷ್ಟು ಇಳಿಕೆ ಮಾಡಲಾಗಿತ್ತು, 4 ರೂಪಾಯಿ ನಿಗದಿಪಡಿಸಲಾಗಿದೆ. ಸರ್ವೀಸ್ ಪ್ರೊವೈಡರ್ ಗಳು ಬದಲಾದರೂ ಅದೇ ಲೈಸನ್ಸ್ಡ್ ಸರ್ವೀಸ್ ಏರಿಯಾದಲ್ಲಿ ಅದೇ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಳ್ಳಲು ಅವಕಾಶವಿದೆ. ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸರ್ವೀಸ್ ಪ್ರೊವೈಡರ್ ಗಳ ವೆಚ್ಚ ಕಡಿಮೆಯಾಗಿರುವುದರಿಂದ ಟ್ರಾಯ್ ಪೋರ್ಟೆಬಿಲಿಟಿ ಶುಲ್ಕವನ್ನು ಇಳಿಕೆ ಮಾಡಿದೆ.
Comments