ಆನ್ಲೈನ್ ಮಾರುಕಟ್ಟೆಯಲ್ಲಿ ಝರಾ ಲುಂಗಿ ವಿನ್ಯಾಸ ಸ್ಕರ್ಟ್ ..!!

31 Jan 2018 2:38 PM | General
473 Report

ಆನ್‍ಲೈನ್ ಮಾರುಕಟ್ಟೆಯಲ್ಲಿ ಝರಾ ಲುಂಗಿ ವಿನ್ಯಾಸ ಸ್ಕರ್ಟ್ ಗಳನ್ನು ಪರಿಚಯಿಸಿದ ಬಳಿಕ ಟ್ವಿಟ್ಟರ್ ನಲ್ಲಿ ಫನ್ನಿ ಕಮೆಂಟ್ ಗಳನ್ನು ಮಾಡಿದ್ದಾರೆ. ಟ್ವಿಟರ್‍ನಲ್ಲಿ ನಮ್ಮ ತಂದೆಯ ಮೂರು ಲುಂಗಿಗಳ ಬೆಲೆ 3 ಡಾಲರ್‍ಗಿಂತ ಕಡಿಮೆ ಎಂದು ಝರಾ ಸ್ಕರ್ಟ್ ಮತ್ತು ಲುಂಗಿಗಳ ಫೋಟೋಗಳನ್ನು ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಫ್ಯಾಶನ್ ಟ್ರೆಂಡ್ ಬದಲಾಗುತ್ತಿದೆ. ಇತ್ತೀಚಿನ ಫ್ಯಾಶನ್‍ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ದೇಸಿ ಲುಕ್‍ಗಳಲ್ಲಿ ವಿದೇಶಿ ಟಚ್ ನೀಡಲಾಗುತ್ತಿದೆ. ಲುಂಗಿ ಭಾರತದಲ್ಲಿ ಎಲ್ಲ ವರ್ಗದ ಜನರು ಧರಿಸ್ತಾರೆ. ಆದ್ರೆ ಇದೇ ಲುಂಗಿಯನ್ನು ‘ಝರಾ’ ಎಂಬ ಕಂಪನಿ ಸ್ಕರ್ಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಲುಂಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಏಷ್ಯಾದ ನೈಋತ್ಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಒಂದು ಲುಂಗಿಗೆ ಮಾರುಕಟ್ಟೆಯಲ್ಲಿ 300 ರೂ. ಬೆಲೆಯಿದೆ. ವಿನೂತನವಾಗಿ ಸ್ಕರ್ಟ್ ಮಾದರಿಗೆ ಝರಾ ಕಂಪೆನಿ ಅಂದಾಜು 5,700 ರೂ. (89.90 ಡಾಲರ್) ನಿಗದಿ ಮಾಡಿದೆ. ಈ ಝಾರಾ ಸ್ಕರ್ಟ್ ಕೇವಲ ಕಂದು (ಬ್ರೌನ್) ಬಣ್ಣದಲ್ಲಿ ದೊರೆಯುತ್ತದೆ. ಆದರೆ ಭಾರತದ ಲುಂಗಿಗಳು ಯಾವುದೇ ಡಿಸೈನ್ ಹಾಗೂ ಕಲರ್‍ಗಳಲ್ಲಿ ದೊರೆಯುತ್ತದೆ.

 

Edited By

Shruthi G

Reported By

Madhu shree

Comments