ಶಾಲಾ ಪಠ್ಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮಕ್ಕಳಿಗೆ ಪಾಠ

"ರಸ್ತೆ ಸಂಚಾರ ಸಮಸ್ಯೆಗಳ ಕುರಿತು ನಮ್ಮ ಮಕ್ಕಳಿಗೆ ಪ್ರಾಯೋಗಿಕ ಅನುಭವವನ್ನು ನೀಡಬೇಕಾಗಿದೆ. ಶಾಲೆಗಳು ಒಂದು ವಾರದಲ್ಲಿ ಕನಿಷ್ಟ ಒಂದು ಗಂಟೆಯವರೆಗೆ ಸಂಚಾರ ನಿಯಂತ್ರಕವನ್ನು ನಿರ್ವಹಿಸುವಂತೆ ತರಬೇತಿ ನೀಡಬೇಕು" ಐಜಿಪಿ ಮತ್ತು ಹೆಚ್ಚುವರಿ ಕಮಾಂಡೆಂಟ್ ಜನರಲ್, ಹೋಮ್ ಗಾರ್ಡ್ಸ್ ಮತ್ತು ಎಕ್ಸ್-ಆಫಿಸಿಯೋ ಹೆಚ್ಚುವರಿ ನಿರ್ದೇಶಕಿ ಸಿವಿಲ್ ಡಿಫೆನ್ಸ್, ಬೆಂಗಳೂರು - ಡಿ ರೂಪಾ ಹೇಳಿದ್ದಾರೆ.
"ನಾವು 2019-20ರ ಶೈಕ್ಷಣಿಕ ವರ್ಷದಿಂದ ನೂತನ ಪಠ್ಯವನ್ನು ನಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಿದ್ದೇವೆ" ಶಿಕಕ್ಷಣ ಸಚಿವ ತನ್ವೀರ್ ಸೇಟ್ ಹೇಳಿದ್ದಾರೆ. ರಾಜ್ಯ ಸರ್ಕಾರಿ, ಅನುದಾನಿತ ಹಾಗು ಅನುದಾನರಹಿತ ಶಾಲೆಗಳಲ್ಲಿ 2019-20ರ ಶೈಕ್ಷಣಿಕ ವರ್ಷದಿಂದ ರಸ್ತೆ ಸುರಕ್ಷತಾ ಕ್ರಮದ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಶಾಲಾ ಪಠ್ಯದಲ್ಲಿ ರಸ್ತೆ ಸುರಕ್ಷತಾ ನಿಯಮವನ್ನು ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ಮನವಿ ಸಲ್ಲಿಸಿದ್ದು ಇದಕ್ಕೆ ಮಾಧ್ಯಮಿಕ ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ 2018-19ರ ಸಾಲಿಗೆ ಪಠ್ಯಪುಸ್ತಕಗಳ ಮುದ್ರಣಕ್ಕೆ ಈಗಾಗಲೇ ತಯಾರಿ ನಡೆದಿರುವ ಕಾರಣ ಪಠ್ಯಕ್ರಮ ಬದಲಾವಣೆಗ್ ಅವಕಾಶವಿರುವುದಿಲ್ಲ. ಆದರೆ 2019-20ರಿಂದ ನೂತನ ಪಠ್ಯಕ್ರಮ ಅಳವಡಿಸಿಕೊಳ್ಳಲಾಗುವುದೆಂಡು ಇಲಾಖೆ ಹೇಳಿದೆ. ರಸ್ತೆ ಸುರಕ್ಷತೆಯ ಕುರಿತು ಶಿಕ್ಷಕರು ವಿಶೇಷ ಡ ತರಬೇತಿಯನ್ನು ಪಡೆದುಕೊಳ್ಳಲಿದ್ದು ದೆಹಲಿ ಮೂಲದ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾಫಿಕ್ ಎಜುಕೇಷನ್, ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಿದೆ. ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮತ್ತು ಅದರ ಶಿಕ್ಷೆಯ ಬಗ್ಗೆ ಮಾಹಿತಿ, ವೇಗ ಮತ್ತು ಪಾದಚಾರಿ ಸುರಕ್ಷತೆ ಒಳಗೊಂಡಿರುವ ರಸ್ತೆಯ ಸುರಕ್ಷತೆಯ ಕುರಿತಾದ ಪಾಠ, ರಸ್ತೆ ಅಪಘಾತದ ಸಮಯದಲ್ಲಿ ತುರ್ತು ಸಂಪರ್ಕಗಳ ಬಗ್ಗೆ ಜ್ಞಾನ, ಹೆದ್ದಾರಿ ಗಸ್ತು ಸಂಪರ್ಕ ಮಾಹಿತಿ, ಇವುಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುತ್ತದೆ.
Comments