ವೋಡಾಫೋನ್ ನಿಂದ ಗ್ರಾಹಕರಿಗೆ ಬಂಪರ್ ಗಿಫ್ಟ್
ಟೆಲಿಕಾಂ ಸಂಸ್ಥೆಗಳ ದರ ಸಮರ ಮುಂದುವರೆದಿದ್ದು, ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ನಂತರ ವೊಡಾಫೋನ್ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡುತ್ತಿದೆ. ವೊಡಾಫೋನ್ 198 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಇನ್ಮುಂದೆ ಗ್ರಾಹಕರಿಗೆ ಪ್ರತಿ ದಿನ 1.4 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಹಾಗೂ ರೋಮಿಂಗ್ ಕಾಲ್ ಜೊತೆ 100 ಸಂದೇಶಗಳು ಉಚಿತವಾಗಿ ಸಿಗಲಿದೆ.
ಈ ಯೋಜನೆಯ ವ್ಯಾಲಿಡಿಟಿ 24 ದಿನಗಳವರೆಗೆ ಇರಲಿದೆ. ಈ ಪ್ಲಾನ್ ಏರ್ಟೆಲ್ ನ 199 ಪ್ಲಾನ್ ಹಾಗೂ ಜಿಯೋದ 149 ಪ್ಲಾನ್ ಪೈಪೋಟಿ ನೀಡಲಿದೆ. ಈ ಹಿಂದಿನ 198 ಪ್ಲಾನ್ ನಲ್ಲಿ ರೀಚಾರ್ಜ್ ಮಾಡಿಸಿದರೆ, ಪ್ರತಿದಿನ 1 ಜಿಬಿ ಡೇಟಾ ಹಾಗೂ ಅನಿಯಮಿತ ವಾಯ್ಸ್ ಕಾಲ್ ಜೊತೆ 100 ಎಸ್ಎಂಎಸ್ ಮಾತ್ರ ಸಿಗುತ್ತಿತ್ತು. ಆದರೆ, ಕರೆ ಮಾಡಲು ಪ್ರತಿದಿನ 250 ನಿಮಿಷ ಮಾತ್ರ ಮಿತಿ ಇರುತ್ತದೆ. 24 ದಿನ ವ್ಯಾಲಿಡಿಟಿಗೆ 1000 ನಿಮಿಷ ಸಿಗಲಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಕಡಿಮೆ ದರದ ರೀಚಾರ್ಜ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.
Comments