OLX ನಲ್ಲಿ ಖರೀದಿ ಮಾಡುವ ಮುನ್ನ ಗ್ರಾಹಕರೇ ಎಚ್ಚರ..!!

ಆನ್'ಲೈನ್'ನಲ್ಲೇ ಕಾರ್ ತೋರಿಸಿ ಆನ್'ಲೈನ್'ನಲ್ಲೇ ಹಣ ಪಡೆದು ವೈಷ್ಣವಿ ಎಂಬುವವರಿಗೆ ವಂಚಿಸಲಾಗಿದೆ. ಜನವರಿ 17 ರಂದು ಒಎಲ್'ಎಕ್ಸ್'ನಲ್ಲಿ ಶಾಪಿಂಗ್ ಮಾಡಲು ವೈಷ್ಣವಿ ಮುಂದಾಗಿದ್ದರು. ಈ ವೇಳೆ ತಮಗೆ ಅಗತ್ಯವಾದ ಬೆಲೆಗೆ ವ್ಯಾಗನಾರ್ ಕಾರ್ ಸಿಕ್ಕಿತ್ತು . 2.70 ಲಕ್ಷದ ವ್ಯಾಗನಾರ್ ಕಾರ್ ಖರೀದಿಸಿದ್ದರು. ಒಎಲ್'ಎಕ್ಸ್'ನಲ್ಲಿದ್ದ ನಂಬರ್'ಗೆ ಕರೆ ಮಾಡಿದಾಗ ಈ ವೇಳೆ ಅಪರಿಚಿತ ವ್ಯಕ್ತಿ ಕಾರ್ ನೀಡುವುದಾಗಿ ಹೇಳಿದ್ದ.
ಕಾರ್ ಫೋಟೊ ಕಳುಹಿಸಿ ಎಸ್'ಬಿಐ ಖಾತೆಗೆ ಹಣ ಹಾಕುವಂತೆ ಸೂಚಿಸಿದ್ದ. SBIN0009044 ಸಂಖ್ಯೆಯ ಖಾತೆಗೆ 97,750 ಸಾವಿರ ಜಮೆ ಮಾಡಿದ್ದರು. ಹಣ ಅಕೌಂಟ್'ಗೆ ಬೀಳುತ್ತಿದ್ದಂತೆ ಅಪರಿಚಿತರು ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವೈಷ್ಣವಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಂದು ವಂಚನೆ ಪ್ರಕರಣದಲ್ಲಿ ಗಾಯತ್ರಿನಗರದ ನಿವಾಸಿ ಶರೀಫ್ ಎಂಬುವವರಿಂದ 35 ಸಾವಿರ ಹಣ ಪಡೆದು ಕಿಡಿಗೇಡಿಗಳು ವಂಚಿಸಿದ್ದಾರೆ. ವಂಚನೆ ಕೆಲ ದಿನಗಳ ಹಿಂದೆ OLX ನಲ್ಲಿ I10 ಕಾರ್ ಜಾಹಿರಾತು ನೋಡಿ ಶರೀಫ್ ಕಾರು ಮಾಲೀಕರನ್ನು ಸಂಪರ್ಕಿಸಿದ್ದರು. ಜಯರಾಮ್ ಎಂಬ ಹೆಸರಿನಲ್ಲಿ ಮಾತನಾಡಿದ್ದ ವ್ಯಕ್ತಿ ತಾನು ಆಸ್ಟ್ರೇಲಿಯಾದಲ್ಲಿದ್ದೇನೆ ನನ್ನ ಕಾರ್ ಏರ್ಪೊಟ್ ನಲ್ಲಿದೆ ಎಂದಿದ್ದ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಟ್ಟು ತೆರಳಿರುವುದಾಗಿ ತಿಳಿಸಿದ್ದ. ಏರ್'ಪೋರ್ಟ್'ನಲ್ಲಿದ್ದ ಮಹಿಳೆಗೆ 65 ಸಾವಿರ ನೀಡಿ ಕಾರ್ ಪಡೆಯುವಂತೆ ಸೂಚಿಸಿದ್ದ. ಅದರಂತೆ ಮೊದಲು 35 ಸಾವಿರ ನೀಡುವಂತೆ ಸೂಚಿಸಿದ್ದ. ಅದರಂತೆ ಆಕೆಯ ಖಾತೆಗೆ ಆನ್ ಲೈನ್ ಮುಖಾಂತರ ಹಣ ಜಮೆ ಮಾಡಿದರು. ಹಣ ಪಡೆದ ಬಳಿಕ ಮಹಿಳೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಏರ್'ಪೋರ್ಟ್ ಬ ಳಿ ತೆರಳಿ ವಿಚಾರಿಸಿದಾಗ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಶರೀಫ್ ದೂರು ನೀಡಿದ್ದಾರೆ.
Comments