ಬೆಂಗಳೂರು ರಸ್ತೆಗಿಳಿಯಲಿರುವ ಪಿಂಕ್ ಆಟೋಗಳು ..!!

ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮದಡಿ ಪಿಂಕ್ ಆಟೋ ರಿಕ್ಷಾಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. 500ಪಿಂಕ್ ಆಟೋಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಪಾಲಿಕೆಯಿಂದ ೮೦ ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ. ಉಳಿದ ಹಣವನ್ನು ಫಲಾನುಭವಿಗಳೇ ಭರಿಸಬೇಕು. ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಆಟೋಗಳನ್ನು ನೀಡಲಾಗುವುದು.
ಮಹಿಳಾ ಪ್ರಯಾಣಿಕರ ಸುರಕ್ಷತೆ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮರಾ , ಜಿಪಿಎಸ್ ವ್ಯವಸ್ಥೆ ಹೊಂದಿರುವ ಹಾಗೂ ಮಹಿಳೆಯರಿಗಾಗಿಯೇ ಮೀಸಲಿರುವ ಪಿಂಕ್ ಆಟೋ ರಿಕ್ಷಾಗಳು ಮಾರ್ಚ್ ಅಂತ್ಯದೊಳಗೆ ನಗರದ ರಸ್ತೆಗಿಳಿಯಲಿದೆ. ಆದರೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ತಕೀಬ್ ಜಾಕಿರ್ ತಿಳಿಸಿದ್ದಾರೆ.ಪಿಂಕ್ ಆಟೋ ಪಡೆಯುವ ಪುರುಷರಿಗೆ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ. ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಆಟೋಗಳನ್ನು ವಿತರಣೆ ಮಾಡಲಾಗುತ್ತದೆ. ಬ್ರಿಗೇಡ್ ರಸ್ತೆ ಸೇರಿದಂತೆ ಕೆಲವೆಡೆ ವಾಹನ ನಿಲುಗಡೆ ತಾಣಗಳಲ್ಲಿ ಈಗಾಗಲೇ ಶೇ.20 ರಷ್ಟು ಜಾಗವನ್ನು ಮಹಿಳೆಯರಿಗೆ ಮೀಸಲಿಡಲು ಪಾಲಿಕೆ ಕ್ರಮ ಕೈಗೊಂಡಿದೆ. ನಗರದಲ್ಲಿ ಪಿಂಕ್ ಹೊಯ್ಸಳಗಳು ರಸ್ತೆಗೆ ಬಂದಿವೆ. ಮೆಟ್ರೋ ರೈಲಿನಲ್ಲಿಯೂ ಮಹಿಳಾ ಚಾಲಕಿಯರಿದ್ದಾರೆ.
Comments