ಕಣಕುಂಬಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾದ ಜೆಡಿಎಸ್ ಶಾಸಕ ಕೋನರಡ್ಡಿ

ಫೆ.4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಮೊದಲು ಅವರು ಮಹದಾಯಿ ಬಗ್ಗೆ ತಮ್ಮ ಸ್ಪಷ್ಟವಾದ ನಿಲುವು ತಿಳಿಸಲಿ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ನಾಯಕರುಗಳ ಕುಮ್ಮಕ್ಕಿನಿಂದಾಗಿ ಗೋವಾ ತಂಡದವರು ಪದೇ ಪದೇ ಮಹದಾಯಿ, ಕಳಸಾ ಮತ್ತು ಬಂಡೂರಿ ನದಿಗಳ ಉಗಮ ಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಕಣಕುಂಬಿಗೆ ಅವರು ಪದೇ ಪದೇ ಭೇಟಿ ನೀಡುವುದಕ್ಕಿಂತ ಮುಂಚೆ ನಮ್ಮ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿ ಭೇಟಿ ಕೊಡಲಿ ಎಂದರು.ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ನಾನೂ ಕೂಡ ಸಕ್ರಿಯವಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಈಗ ಇದೇ ವಿಚಾರವಾಗಿ ಜ.31 ರಂದು ಕಣಕುಂಬಿಯ ಮಾವಲಿ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಲಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಸಂಸ್ಕೃತಿಯಿಂದಾಗಿ ನಮ್ಮ ರಾಜ್ಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
Comments