ಕೆಎಸ್​ಆರ್​​ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್..!!

29 Jan 2018 2:29 PM | General
396 Report

ಕೆಎಸ್​ಆರ್​ಟಿಸಿ ಹಾಗೂ ಹಾಗೂ ಬಿಎಂಟಿಸ್ ಬಸ್ ಪ್ರಯಾಣ ದರವನ್ನು ಶೇಕಡ 10 ರಷ್ಟು ಕಡಿಮೆ ಮಾಡುವ ನಿರ್ಧಾರವನ್ನು ಸಾರಿಗೆ ಇಲಾಖೆ ಕೈಗೊಂಡಿದೆ ಅಂತ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ. ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತ ಕೆಎಸ್​ಆರ್​ಟಿಸಿ ಹಾಗೂ ಹಾಗೂ ಬಿಎಂಟಿಸ್ ಬಸ್ ಪ್ರಯಾಣ ದರವನ್ನು ಶೇಕಡ 10 ರಷ್ಟು ಕಡಿಮೆ ಮಾಡುವ ನಿರ್ಧಾರವನ್ನು ಸಾರಿಗೆ ಇಲಾಖೆ ಕೈಗೊಂಡಿದೆ.

 ಈ ನಿಟ್ಟಿನಲ್ಲಿ ಈ ಬಗ್ಗೆ ಸಿ.ಎಂ ಸಿದ್ದರಾಮಯ್ಯರ ಒಪ್ಪಿಗೆ ಬಳಿಕ ಅಂತಿಮ ತೀರ್ಮಾನವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತ ಬಿಎಂಟಿಸಿಯಲ್ಲಿ ಮೂರಕ್ಕಿಂತ ಹೆಚ್ಚು ಟಿಕೆಟ್ ಪಡೆಯುವ ಕುಟುಂಬಕ್ಕೆ ಶೇ 15ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಅಂತ ತಿಳಿಸಿದ ಅವರು ನಮ್ಮ ಸಂಸ್ಥೆಯಿಂದ ಮಹಿಳಾ ಡ್ರೈವರ್​ಗಳಿಗೆ ಉಚಿತ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ಹಾಗೂ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಉಚಿತ ಲೈಸೆನ್ಸ್ ನೀಡುವಂತೆ ಮುಖ್ಯಮಂತ್ರಿ ಅವರ ಬಳಿ ಮನವಿ ಸಲ್ಲಿಸುವದಾಗಿ ತಿಳಿಸಿದರು

Edited By

Suresh M

Reported By

Madhu shree

Comments