ಇತ್ತೀಚಿಗೆ ಜನರ ಕೈ ಸೇರುತ್ತೀವೆ ಖೋಟಾ ನೋಟುಗಳು..!

ಕೇಂದ್ರ ಸರ್ಕಾರ ಭಯೋತ್ಪದನೆ ಹಾಗೂ ಖೋಟಾ ನೋಟಗಳನ್ನು ಮಟ್ಟ ಹಾಕುವ ಸಲುವಾಗಿ ನೋಟು ಅಮಾನ್ಯೀಕರಣ ಮಾಡಿದ ನಂತರ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ ಈ ನಡುವೆ ಜನರಿಗೆ ಚಿಲ್ಲರೆ ಸಮಸ್ಯೆಯನ್ನು ತಲುಪಿಸುವ ಸಲುವಾಗಿ ಹೊಸ ನಮೂನೆಯಲ್ಲಿ ನೋಟುಗಳನ್ನು ಸಹ ಕೇಂದ್ರ ಸರ್ಕಾರ ಬಿಡುಗಡೆಗೆ ಮಾಡಿದೆ.
ಆದರೆ ಈ ನಡುವೆ ಖೋಟಾ ನೋಟುಗಳು ಜನರ ಕೈ ಸೇರುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಅಂದ ಹಾಗೇ ನಕಲಿ ನೋಟು ಮುದ್ರಿಸುತ್ತಿದ್ದ ಮೂವರು ಆರೋಪಿಗಳನ್ನು ಡಿಸಿಐಬಿ ಇನ್ಸ್ ಪೆಕ್ಟರ್ ಚಂದ್ರಕಾಂತ ಅವರು ಎಲ್ .ಟಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹಾಜಿಮಸ್ತಾನ ವಾಲೀಕಾರ್(23), ಸೀರಾಜ್ ಮಳ್ಳಿ(27), ಮೇಹಬೂಬ್ ವಾಲೀಕಾರ್(23) ಬಂಧಿತ ಆರೋಪಿಗಳು. ಬಂಧಿತರಿಂದ 200, 500 ಹಾಗೂ 2000 ಮುಖಬೆಲೆಯ ಒಟ್ಟು 67,200ರೂ ಮೌಲ್ಯದ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಲ್ಲದೇ ದಾಳಿ ವೇಳೆ ಖೋಟಾ ನೋಟು ಮುದ್ರಿಸುವ 38 ಪೇಪರ್‍ಗಳು, 2ಎಪ್ಸಾನ್ ಕಂಪನಿಯ ಪ್ರೀಂಟರ್‍ಗಳನ್ನ ಜಪ್ತಿ ಮಾಡಿದ್ದಾರೆ. ವಿಜಯಪುರ ನಗರದ ದರ್ಗಾ ಜೈಲು ಬಳಿಯ ಮನೆಯೊಂದರಲ್ಲಿ ಖೋಟಾ ನೋಟು ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ಈ ದಾಳಿ ಮಾಡಿದ್ದಾರೆ. ಈ ಕುರಿತು ಡಿಸಿಐಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments