ಸಿ.ಪಿ.ಯೋಗೀಶ್ವರ್‌ಗೆ ಟಾಂಗ್ ನೀಡಲು ಮುಂದಾದ ಎಚ್ ಡಿಕೆ
ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಚುನಾವಣೆಗೆ ಇಳಿಸುವ ಆಶಯ ಇದೆ. ಅದೇ ರೀತಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಆಸೆ. ಆದರೆ ಅದಾಗಲೇ ಪಕ್ಷದಿಂದ, ದೇವೇಗೌಡರ ಕುಟುಂಬದಿಂದ ಕೇವಲ ಇಬ್ಬರಿಗೆ ಮಾತ್ರ ಅಂದರೆ ಕುಮಾರಸ್ವಾಮಿ ಹಾಗೂ ರೇವಣ್ಣಗೆ ಮಾತ್ರ ಟಿಕೆಟ್ ಎಂದು ಘೋಷಿಸಲಾಗಿದೆ.
ಆದರೆ ಕುಟುಂಬದ ವಿಚಾರ ಬಂದಾಗ ಗೌಡರ ನಿರ್ಧಾರ ಅಂತಿಮ. ಅವರು ಈಗಲೂ ಮೊಮ್ಮಗನನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ. ಈ ಸಂಬಂಧ ಸೊಸೆ ಭವಾನಿ ರೇವಣ್ಣಗೂ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಿಂದ ಪತ್ನಿ ಅನಿತಾರನ್ನು ಕಣಕ್ಕಿಳಿಸಿ ಅಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಲಿರುವ ಸಿ.ಪಿ.ಯೋಗೀಶ್ವರ್‌ಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.
Comments