ಕಳಸಾ ಪ್ರದೇಶಕ್ಕೆ ಗೋವಾ ವಿಧಾನಸಭೆ ಅಧ್ಯಕ್ಷ ಭೇಟಿಯ ಬಗ್ಗೆ ಎಚ್ ಡಿಕೆ ಹೇಳಿದ್ದೇನು?

ಕಳಸಾ ಕಾಮಗಾರಿ ಪ್ರದೇಶಕ್ಕೆ ಗೋವಾ ವಿಧಾನಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ನಮ್ಮ ಸರ್ಕಾರದ ಅನುಮತಿ ತೆಗೆದುಕೊಂಡು ಬಂದಿದ್ದಾರಾ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗೋವಾ ವಿಧಾನಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ನಮ್ಮ ಸರ್ಕಾರದ ಅನುಮತಿ ತೆಗೆದುಕೊಂಡು ಬರದಿದ್ದರೆ ಅವರನ್ನು ಸರ್ಕಾರ ಬಂಧಿಸಬೇಕು. ಒಂದು ವೇಳೆ ನ್ಯಾಯಾಧಿಕರಣದಿಂದ ನಿರ್ಬಂಧ ಹೇರದಿದ್ದರೆ ಅದನ್ನು ಗಂಭೀರವಾಗಿ ಪರಗಣಿಸಬೇಕಿಲ್ಲ. ಇದು ಭಾರತ, ಯಾರು ಎಲ್ಲಿ ಬೇಕಾದರೂ ಸುತ್ತಾಡಬಹುದು ಎಂದರು.ಎರಡೂ ರಾಷ್ಟ್ರೀಯ ಪಕ್ಷಗಳು ಈ ಮಹದಾಯಿ ಕಳಸಾ ಬಂಡೂರಿ ವಿವಾದ ಬಗೆಹರಿಸುವಲ್ಲಿ ಕಾಲಹರಣ ಮಾಡುತ್ತಿವೆ. ಅಲ್ಲದೆ ಈ ಎರಡು ಪಕ್ಷಗಳಿಗೆ ಸಮಸ್ಯೆ ಬಗೆಹರಿಸುವ ಗಾಂಭೀರ್ಯತೆ ಇಲ್ಲ. ಈ ಎರಡು ಪಕ್ಷಗಳು ಕನ್ನಡಿಗರ ಬೇಡಿಕೆಗಳನ್ನು ಕಡೆಗಣಿಸಿವೆ ಎಂದು ವಾಗ್ದಾಳಿ ನಡೆಸಿದರು. ಈ ಸಮಸ್ಯೆ ಬಗೆಹರಿಯಬೇಕೆಂದರೆ ಪ್ರಧಾನಿ ಮಧ್ಯ ಪ್ರವೇಶ ಮಾಡಿ ಕುಡಿಯುವ ನೀರು ಕೊಡಿಸಲು ಮುಂದಾಗಬೇಕು. ಇಲ್ಲದಿದ್ದರೆ ಟ್ರಿಬ್ಯುನಲ್ ಮಧ್ಯಂತರ ಆದೇಶ ನೀಡಿ ಇಷ್ಟು ಪ್ರಮಾಣದ ಕುಡಿಯುವ ನೀರನ್ನು ಕೊಡಿ ಎಂದು ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
Comments